ತಾರಕ ಜಲಾಶಯದಿಂದ ಅಪಾರ ನೀರು ಪೋಲು: ರೈತರ ಆಕ್ರೋಶ

water wastage from Taraka reservoir: Farmers

30-07-2018

ಮೈಸೂರು: ಅಧಿಕಾರಿಗಳ ಯಡವಟ್ಟಿನಿಂದ ಸಾವಿರಾರು ಕ್ಯೂಸೆಕ್ ನೀರು ಪೋಲಾಗಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ಹೆಚ್.ಡಿ.ಕೋಟೆ ತಾಲ್ಲೂಕಿನ ತಾರಕ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ಜಲಾಶಯದಿಂದ ನೀರು ಹೋಗಲು ಕ್ರಸ್ಟ್ ಗೇಟು ತೆರೆಯಲಾಗಿತ್ತು. ಇದೀಗ ನೀರು ನಿಲ್ಲಿಸುವ ಸಲುವಾಗಿ ಗೇಟನ್ನು ಮುಚ್ಚಬೇಕಿದ್ದು, ತಾಂತ್ರಿಕ ಸಮಸ್ಯೆಯೋ ಅಥವ ಇನ್ನಾವುದೋ ಸಮಸ್ಯೆಯಿಂದ ಕ್ರಸ್ಟ್ ಗೇಟನ್ನು ಕೆಳಗಿಳಿಸಿ ಮುಚ್ಚಾಲಾಗದೇ ಭಾರೀ ಪ್ರಮಾಣದ ನೀರು ಪೋಲಾಗುತ್ತಿದೆ. ಇದು ಡ್ಯಾಂ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆ ವೇಳೆ ಕ್ರಸ್ಟ್‌ ಗೇಟ್ ಸರಿ ಇದೆಯಾ ಎಂದು ನೋಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅಧಿಕಾರಿಗಳ ಯಡವಟ್ಟಿಗೆ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ಹೋಗಿದೆ. ನೀರು ಪೋಲಾಗುತ್ತಿರುವುದಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿದೆ. 5 ವರ್ಷಗಳ ನಂತರ ಜಲಾಶಯ ತುಂಬಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ. ಈ ಕುರಿತು ಅಧಿಕಾರಿಗಳ ಮತ್ತು ರೈತರ ನಡುವೆ ವಾಗ್ವಾದವೂ ನಡೆದಿದೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Dam water ತಾರಕ ಜಲಾಶಯ ಕ್ರಸ್ಟ್ ಗೇಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ