ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ!

A son killed his own mother!

28-07-2018

ಬೆಂಗಳೂರು: ಜಮೀನು ವಿಚಾರವಾಗಿ ಉಂಟಾದ ಕಲಹದಿಂದ ಆಕ್ರೋಶಗೊಂಡ ಪುತ್ರನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಶವವನ್ನು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಮೃಗೀಯ ಘಟನೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚೆನ್ನಪಟ್ಟಣದ ನಾಗವಾರದ ನಾಗಮ್ಮ (70)ಎಂದು ಕೊಲೆಯಾದ ತಾಯಿಯನ್ನು ಗುರುತಿಸಲಾಗಿದೆ. ಸುರೇಶ್ ಹೆತ್ತತಾಯಿಯನ್ನು ಕೊಂದ ಪಾಪಿ ಮಗನಾಗಿದ್ದು ಈತ ಕಳೆದ ಮೂರು ದಿನಗಳ ಹಿಂದೆಯೇ ತಾಯಿ ನಾಗಮ್ಮನನ್ನು ಕೊಲೆ ಮಾಡಿ ಮನೆಯ ಹಿಂದಿನ ಶೌಚಾಲಯದ ಗುಂಡಿಯೊಳಗೆ ಹಾಕಿ ಮುಚ್ಚಿದ್ದಾನೆ.

ಮೃತ ಮಹಿಳೆ ನಾಗಮ್ಮಳ ಹೆಸರಿನಲ್ಲಿ 10 ಗುಂಟೆ ಜಮೀನು ಇದ್ದು, ಅದನ್ನ ತನ್ನ ಹೆಸರಿಗೆ ಬರೆದುಕೊಡುವಂತೆ ಮಗ ಸುರೇಶ್ ಪದೇ ಪದೇ ತಾಯಿಯ ಜೊತೆ ಜಗಳ ಮಾಡುತ್ತಿದ್ದನು. ಆದರೆ ಮೂರು ದಿನಗಳ ಹಿಂದೆ ಕುಡಿದು ಬಂದ ಆರೋಪಿ ಸುರೇಶ್ ಮತ್ತೆ ಜಮೀನು ವಿಚಾರವಾಗಿ ಗಲಾಟೆ ನಡೆಸಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಾಯಿ ನಾಗಮ್ಮರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಶೌಚಾಲಯದ ಗುಂಡಿಯಲ್ಲಿ ಶವವನ್ನ ಮುಚ್ಚಿ ಏನು ತಿಳಿಯದಂತೆ ನಾಟಕವಾಡಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಎಂ.ಕೆ.ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲ್ಲೂಕು ಅಧಿಕಾರಿಗಳ ಅನುಮತಿ ಪಡೆದು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ತಯಾರಿ ನಡೆಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Murder Mother ಶವ ಮರಣೋತ್ತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ