ಕರ್ತವ್ಯಲೋಪ, ಇಬ್ಬರು ಪಿಡಿಒಗಳ ಅಮಾನತು...!

Suspicion of two PDOs ...

28-07-2018

ಬೀದರ್: ಅನಗತ್ಯ ಗೈರು ಹಾಜರು ಹಾಗೂ ಕರ್ತವ್ಯಲೋಪ ಎಸಗಿದ ಬೀದರ್ ತಾಲ್ಲೂಕಿನ ಇಬ್ಬರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಒ ಸೆಲ್ವಮಣಿ ಆದೇಶ ಮಾಡಿದ್ದಾರೆ. ಬೀದರ್ ತಾಲ್ಲೂಕಿನ ಸಂಗೊಳಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮರಾವ್ ಹನುಮಂತ ಮತ್ತು ಯರನಳ್ಳಿ ಪಂಚಾಯತ್ ನ ಪಿಡಿಒ ಜ್ಞಾನು ರಾಮಚಂದ್ರ ಎಂಬಾತರನ್ನು ಅಮಾನತು ಮಾಡಲಾಗಿದೆ.

ಸಂಗೊಳಗಿ ಪಂಚಾಯತಿ ಪಿಡಿಒ ಭೀಮರಾವ ಅವರು ಸ್ವಚ್ಛ ಭಾರತ ಅಭಿಯಾನ ಯೋಜನೆಯ ಜಾಗೃತಿ ಕಾರ್ಯಕ್ರಮ ಹಾಗೂ ಜು. 24ರಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರ ಕುಡಿಯುವ ನೀರಿನ ಸಮಸ್ಯೆ ಸಭೆಯಲ್ಲೂ ಅನಗತ್ಯ ಗೈರು ಹಾಜರಾಗಿದ್ದರು. ಯರನಳ್ಳಿ ಪಂಚಾಯತಿ ಪಿಡಿಒ ಜ್ಞಾನು ವಿರುದ್ಧ ಪಂಚಾಯತಿ ಸದಸ್ಯರು ದೂರಿದ್ದ ಹಿನ್ನಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಿ ಸಿಇಒ ಸೆಲ್ವಮಣಿ ಆದೇಶ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

PDO suspended ಸ್ವಚ್ಛ ಭಾರತ ಪಂಚಾಯತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ