ಗದಗಕ್ಕೆ ಆಗಮಿಸಿದ್ದಾರೆ ಪ್ರಧಾನಿ‌ ನರೇಂದ್ರ ಮೋದಿ ಸಹೋದರ

Narendra modi brother visited gadag

28-07-2018

ಗದಗ: ಪ್ರಧಾನಿ‌ ನರೇಂದ್ರ ಮೋದಿ ಅವರ ಸಹೋದರ, ಪ್ರಹ್ಲಾದ್ ಮೋದಿ ಅವರು ಇಂದು ಗದಗ ನಗರಕ್ಕೆ ಆಗಮಿಸಿದ್ದಾರೆ. ಪ್ರಹ್ಲಾದ್ ಮೋದಿ ಅವರು, ಅಖಿಲ ಭಾರತ ಪಡಿತರ ವಿತರಕರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರು. ಬಳ್ಳಾರಿ‌ಯಲ್ಲಿ ಪಡಿತರ ವಿತರಕ ಸಂಘದ ರಾಜ್ಯ ಕಾರ್ಯದರ್ಶಿ ನಿಧನ ಹಿನ್ನೆಲೆ, ಸಾಂತ್ವನ ಹೇಳಲು ಆಗಮಿಸಿದ್ದಾರೆ. ಈ ವೇಳೆ ಗದಗ ಜಿಲ್ಲೆಯಲ್ಲಿ ಕಾರ್ಯಕರ್ತನ್ನು ಭೇಟಿ ಮಾಡಿದರು. ನಂತರದಲ್ಲಿ ನಗರದ ಡಾ.ಶೇಖರ್ ಸಜ್ಜನರ್ ಮನೆಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಉಪಹಾರ ಸವಿದರು. ನಗರದಲ್ಲೇ ತಂಗಲಿರುವ ಅವರು, ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಅಖಿಲ ಭಾರತ ಗಾಣಿಗ ಸಮಾಜ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

prahlad modi gadag ಕಾರ್ಯಕರ್ತ ಉಪಾಧ್ಯಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ