ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ: ರೋಗಿಗಳ ಪರದಾಟ

private hospital doctors strike against NMC

28-07-2018

ಕೊಪ್ಪಳ: 'ರಾಷ್ಟ್ರೀಯ ವೈದ್ಯಕೀಯ ಆಯೋಗ' ರಚಿಸಿರುವುದನ್ನು ವಿರೋಧಿಸಿ ಇಂದು ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಕೊಪ್ಪಳದಲ್ಲೂ ಬಂದ್ ಬಿಸಿ ಜೋರಾಗೇ ಇದ್ದು, ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ. ಇದರಿಂದ ಹೊರ ರೋಗಿಗಳು ಪರದಾಡುವಂತಾಗಿದೆ. ಪ್ರತಿಭಟನೆ ಕುರಿತು ಮಾತನಾಡಿದ ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ಕೆ.ಜಿ.ಕುಲಕರ್ಣಿ, ಒಪಿಡಿಗೆ ಬರುವ ರೋಗಿಗಳನ್ನು‌ ನೋಡುವುದಿಲ್ಲ. ಒಳರೋಗಿಗಳಿಗೆ ಮಾತ್ರ ಚಿಕಿತ್ಸೆ ‌ನೀಡಲಾಗುವುದು. ಸಂಜೆ 6 ಗಂಟೆವರೆಗೂ ಸೇವೆ ಸ್ಥಗಿತಗೊಳಿಸಲಾಗಿದ್ದು, ಸಹಕರಿಸುವಂತೆ ರೋಗಿಗಳಲ್ಲಿ ಮನವಿ ಮಾಡಿದ್ದೇವೆ ಎಂದರು.  ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದೇವೆ. ವೈದ್ಯರ ಮೇಲೆ ನಿಯಂತ್ರಣ ಸಾಧಿಸುವ ಈ ಕಾಯ್ದೆಯನ್ನು ಖಂಡಿಸಿದ್ದೇವೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ