ಪ್ರತ್ಯೇಕ ರಾಜ್ಯ ಬೇಕು ಎನ್ನುವುದು ಸರಿಯಲ್ಲ: ಹೊರಟ್ಟಿ

Basavaraj horatti Reaction on separate uttar karnataka

28-07-2018

ಹುಬ್ಬಳ್ಳಿ: ‘ಪ್ರತ್ಯೇಕ ರಾಜ್ಯ ಬೇಕು ಎನ್ನುವುದು ಸರಿಯಲ್ಲ, ನಮ್ಮ ನಿಲುವು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬಾರದು ಎಂಬುದು’ ಎಂದು ವಿಧಾನ ಪರಿಷತ್ ಹಂಗಾಮಿ ಸಭಾಪತಿ ‌ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಆಗ್ರಹಿಸುತ್ತಿರುವುದರ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ಅವರು, ‘ನಾನು ನಿನ್ನೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ, ಎಲ್ಲಾ ಹೋರಾಟಗಾರರನ್ನ ಮತ್ತು ಮಾಠಾಧೀಶರನ್ನು ಸಭೆಗೆ ಕರೆಯುತ್ತೆನೆ. ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ‌ ಸಭೆ ಕರೆಯಲು ಸಿಎಂ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.

ಎಲ್ಲಾ ಮಾಹಿತಿಗಳನ್ನು ತರಲಿ, ಉತ್ತರ ಕರ್ನಾಟಕಕ್ಕೆ ಏನಾದರೂ ನಾನು ಅನ್ಯಾಯ ಮಾಡಿದ್ದರೆ, ಅದನ್ನ ತಕ್ಷಣ ಸರಿ ಪಡಿಸಿಕೊಳ್ಳುತ್ತೆನೆ. ಬಜೆಟ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿರಬೇಕು. ಹೋರಾಟ ಮಾಡುವವರು ಮತ್ತು ಸ್ವಾಮೀಜಿಗಳೇ ಸಮಯ ಹಾಗೂ ಸ್ಥಳ ನಿಗದಿ ಮಾಡಲಿ ಎಂದು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ.

ಚರ್ಚೆ ನಂತರ ಅನ್ಯಾಯವಾಗಿದ್ದರೆ, ಆ ಅನ್ಯಾಯವನ್ನು ಹೇಗೆ ಸರಿಪಡಿಸಬೇಕು ಮತ್ತು ನಮಗೆ ಬರುವಂತ ಯೋಜನೆಗಳನ್ನು ನಮಗೆ ಬರುವಂತೆ ಒತ್ತಾಯ ಮಾಡಬೇಕು. ಅದನ್ನ ಬಿಟ್ಟು ಪ್ರತ್ಯೇಕ ರಾಜ್ಯ ಮಾಡುವುದರಿಂದ ಪುರುಷಾರ್ಥವನ್ನ ಸಾಧಿಸುವುದಿಲ್ಲ, ಇದರಿಂದ ಏನೂ ಉಪಯೋಗವಿಲ್ಲ ಎಂದರು.

ನಂಜುಂಡಪ್ಪ ವರದಿ ಬಂದ ನಂತರ ಉತ್ತರ ಕರ್ನಾಟಕದವರೇ ಅನೇಕರು ಮುಖ್ಯಮಂತ್ರಿಗಳಾಗಿದ್ದಾರೆ. ಆಗ ಏಕೆ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಏಕೆ ಮಾತನಾಡಿಲ್ಲ.  ಉತ್ತರ ಕರ್ನಾಟಕ ಹಿಂದುಳಿಯಲು ಜನಪ್ರತಿನಿಧಿಗಳೇ ಕಾರಣ. ನಾವು ಎಲ್ಲರೂ ಗಟ್ಟಿಯಾಗಿ ಉಳಿದಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಪಕ್ಷಾತೀತವಾಗಿ, ಒಂದಾಗು ಚರ್ಚೆಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಇದು ನನ್ನ ಅನಿಸಿಕೆ ಎಂದಿದ್ದಾರೆ.

ಬಂದ್‌ ಗಳನ್ನ ಮಾಡುವ ಮೊದಲು, ಅನ್ಯಾಯಗಳ ಬಗ್ಗೆ ಪಟ್ಟಿ ಮಾಡಲಿ. ಪಾಟೀಲ್ ಪುಟ್ಟಪ್ಪನವರು ಅಖಂಡ ಕರ್ನಾಟಕ ಇರಬೇಕು ಎಂದು‌ ಮಾತನಾಡಿದವರು. ಈಗ ಅನ್ಯಾಯವಾಗಿದ್ದರ ಬಗ್ಗೆ ಅವರು ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದಾರೆ. ನಾನು ಅವರ ಜೊತೆ ಚರ್ಚೆ ಮಾಡುತ್ತೇನೆ, ಪುಟ್ಟಪ್ಪನವರು ರಾಜ್ಯವನ್ನ ಒಡೆಯವವರಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

Basavaraj horatti uttar karnataka ಪಕ್ಷಾತೀತ ಅಖಂಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ