ಪ್ರಗತಿ ಪರಿಶೀಲನಾ ಸಭೆಯಲ್ಲಿ: ಚಾಟಿಂಗ್,ವಾಚಿಂಗ್,ಸೆಂಡಿಂಗ್!

Progress Review Meeting: Chat, Watching, and Sending

28-07-2018

ಚಿಕ್ಕಬಳ್ಳಾಪುರ: ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು, ಆಗಬೇಕಾದ ಕಾರ್ಯಗಳು, ಹೊಸ ಕಾಮಗಾಗಿ, ವಿವಿಧ ಕಾಮಗಾರಿಗಳ ವಿವರಣೆ, ಸಮಸ್ಯೆಗಳಿಗೆ ಪರಿಹಾರ ಈ ರೀತಿಯ ಚರ್ಚೆಗಳು ನಡೆಯುವುದು ಸಾಮಾನ್ಯ. ಆದರೆ ಚಿಕ್ಕಬಳ್ಳಾಪುರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ ಸಭೆಯಲ್ಲಿ ನಡೆದದ್ದೇ ಬೇರೆ. ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಅಧಿಕಾರಿಗಳು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸೊದನ್ನು ಬಿಟ್ಟು ಮೊಬೈಲ್ ನಲ್ಲೇ ತಲ್ಲೀನರಾಗಿರುವುದು ಕಂಡು ಬಂದಿದೆ. ಜಿಲ್ಲಾ ಮಟ್ಟದ ಬಹುತೇಕ ಅಧಿಕಾರಿಗಳು ಸ್ಮಾರ್ಟ್ ಪೋನ್ ಗಳನ್ನು ಹಿಡಿದುಕೊಂಡು, ತಮ್ಮ ಪಾಡಿಗೆ ತಾವು ಚಾಟಿಂಗ್, ವಾಚಿಂಗ್, ಸೆಂಡಿಂಗ್ ಮಾಡುತ್ತಾ ಸಭೆಯಲ್ಲಿ ಕಾಲ ಕಳೆದಿದ್ದಾರೆ. ಮೊಬೈಲ್ ನೋಡಿಕೊಂಡೇ ಸಭೆಯ ಸಮಯ ವ್ಯರ್ಥ ಮಾಡಿದ್ದಾರೆ. ಸಭೆಯ ಕಡೆ ಗಮನ ಕೊಡದೆ ಮೊಬೈಲ್ ನಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಕಾಟಚಾರದಂತೆ ಇದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ವಿರುದ್ಧ, ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Meeting officers ಪರಿಶೀಲನಾ ಸಭೆ ಸಾರ್ವಜನಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ