ಚಂದ್ರ ಗ್ರಹಣ ವೇಳೆ ಕಳ್ಳರ ಕೈಚಳಕ

Theft in 8 different shops at mysore

28-07-2018

ಮೈಸೂರು: ನಿನ್ನೆ ರಾತ್ರಿ ಚಂದ್ರ ಗ್ರಹಣದ ವೇಳೆ ಕಳ್ಳರು ತಮ್ಮ ಕೈಚ‌ಳಕ ತೋರಿದ್ದಾರೆ. ಗ್ರಹಣ ಕಾಲದಲ್ಲಿ ಜನರು ಹೊರಕ್ಕೆ ಬಾರದಿದ್ದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಸುಮಾರು 8 ಅಂಗಡಿಗಳಿಗೆ ಕನ್ನ ಹಾಕಿದ್ದಾರೆ. ಮೈಸೂರಿನ ಕನಕದಾಸ ನಗರದ ನೇತಾಜಿ ವೃತ್ತದ ಬಳಿ ಇರುವ ಅಂಗಡಿಗಳಲ್ಲಿ ಲಕ್ಷಾಂತರ ನಗದು ಸೇರಿದಂತೆ ಇನ್ನಿತರ ಬೆಳೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಮೆಡಿಕಲ್‌ ಸ್ಟೋರ್, ಸ್ಟೇಷನರಿ, ಪ್ರಾವಿಷನ್ ಸ್ಟೋರ್ ಗಳ‌ ರೋಲಿಂಗ್ ಶೆಟರ್ ಮುರಿದು ಒಳ ನುಗ್ಗಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಕುವೆಂಪು ನಗರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಕಳ್ಳರಿಗಾಗಿ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ