ಮಾಲ್ ನಲ್ಲಿ ಯುವತಿಯರ ಫೋಟೋ ಕ್ಲಿಕ್: ಯುವಕನಿಗೆ ಧರ್ಮದೇಟು

Photos of girls clicked by a guy: beaten by women

28-07-2018

ಬೆಂಗಳೂರು: ಮಾಲ್ ನಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದ ಯುವಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ ಮಹಿಳೆಯರು ಪೊಲೀಸರಿಗೆ ವಶಕ್ಕೆ ಒಪ್ಪಿಸಿದ್ದಾರೆ. ನಗರದ ವೈಟ್ ಫೀಲ್ಡ್ ನಲ್ಲಿನ ಪ್ರತಿಷ್ಠಿತ ಮಾಲ್ ಒಂದರಲ್ಲಿ ಈ ರೀತಿಯ ಘಟನೆ ನಡೆದಿದೆ. ಮಾಲನಲ್ಲಿ ಸಂಚರಿಸುತ್ತಿದ್ದ ಯುವತಿಯರ, ಮಹಿಳೆಯರ ಫೋಟೋಗಳನ್ನು ಅವರ ಅರಿವಿಗೆ ಬಾರದಂತೆ ಕ್ಲಿಕ್ಕಿಸುತ್ತಿದ್ದನು. ಯುವನ ವರ್ತನೆಯಿಂದ ಅನುಮಾನ ಬಂದು ಆತನ ಮೋಬೈಲ್ ಚೆಕ್ ಮಾಡಿದಾಗ ಸ್ಥಳದಲ್ಲಿದ್ದ ಮಹಿಳೆಯರು ಸೇರಿದಂತೆ ಹಲವು ಯುವತಿಯರ, ಮಹಿಳೆಯರ ಫೋಟೋಗಳಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಮಹಿಳೆಯರು, ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಯುವಕ ಗೌತಮ್ ಎಂಬುದಾಗಿ ತಿಳಿದು ಬಂದಿದೆ. ಧರ್ಮದೇಟು ಕೊಟ್ಟ ಬಳಿಕ ಮಹದೇವಪುರ ಪೊಲೀಸರಿಗೊಪ್ಪಿಸಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

Photo Mobile ಹಿಗ್ಗಾಮುಗ್ಗ ಧರ್ಮದೇಟು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ