ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡ ಸಚಿವ ಜಿಟಿಡಿ

Minister GTD strongly defended his decision

28-07-2018

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶ್ವವಿದ್ಯಾಲಯಗಳ ಸಿಂಡಿಕೇಟ್‍ಗಳಿಗೆ ಮಾಡಿದ್ದ ನಾಮಕರಣವನ್ನು ರದ್ದು ಮಾಡಿದ ತಮ್ಮ ನಿರ್ಧಾರವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಹೊಸ ಸರ್ಕಾರ ಬಂದಾಗ ಹಿಂದಿನ ಸರ್ಕಾರದ ನೇಮಕಾತಿಗಳನ್ನು ರದ್ದುಗೊಳಿಸುವುದು ಸಹಜ. ಸಿದ್ದರಾಯಮಯ್ಯ ಮುಖ್ಯಮಂತ್ರಿ ಆಗಿ ಬಂದಾಗ ಹಿಂದಿನ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಸಿಂಡಿಕೇಟ್‍ಗಳಿಗೆ ಮಾಡಿದ್ದ ನೇಮಕಾತಿಗಳನ್ನು ರದ್ದು ಮಾಡಿದ್ದರು. ನಾನು ಸಹ ಸಿದ್ದರಾಮಮಯ್ಯ ಮಾಡಿದ್ದ ನೇಮಕಾತಿಗಳನ್ನು ರದ್ದು ಮಾಡಿದ್ದೇನೆ. ಈ ನೇಮಕಾತಿಯಲ್ಲಿ ಬಹುತೇಕ ಅನರ್ಹರೇ ಇದ್ದರು ಎಂದು ಹೇಳಿದ್ದಾರೆ.

ನಮ್ಮ ಸರಕಾರ ಬಂದ ಮೇಲೆ ವಿವಿ ಕುಲುಪತಿಗಳ ನೇಮಕವಾಗಿಲ್ಲ. ಯಾವ ಯಾವ ವಿವಿಗಳಲ್ಲಿ ಕುಲಪತಿಗಳ ಹುದ್ದೆ ಖಾಲಿ ಇವೆ, ಎಷ್ಟು ವರ್ಷದಿಂದ ಖಾಲಿ ಇವೆ ಎಂಬ ಮಾಹಿತಿ ತರಿಸಿಕೊಂಡಿದ್ದೇವೆ. ಇನ್ನೊಂದು ತಿಂಗಳಲ್ಲಿ ಖಾಲಿ ಇರುವ ಕುಲಪತಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದಲ್ಲಿ ಸಾಕಷ್ಟು ಮಾರ್ಪಾಡಾಗಬೇಕಾಗಿದೆ. ಎಲ್ಲ ಕಾಲೇಜುಗಳಲ್ಲಿ ಕೌಶಲಾಭಿವೃದ್ಧಿ ತರಬೇತಿಗಳು ಏಕಕಾಲಕ್ಕೆ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.

102 ಪದವಿ ಕಾಲೇಜುಗಳಿಗೆ ಕಟ್ಟಡಗಳೇ ಇಲ್ಲ. 3800 ಉಪನ್ಯಾಸಕರ ಅಗತ್ಯವಿದ್ದು, 10 ಸಾವಿರ ಅತಿಥಿ ಉಪನ್ಯಾಸಕರನ್ನು ಮುಂದುವರೆಸುತ್ತೇವೆ. ಕೌಶಲ್ಯಾಭಿವೃದ್ಧಿ ಕೋರ್ಸ್‍ಗಳನ್ನು ಎಲ್ಲಾ ಕಾಲೇಜುಗಳಲ್ಲಿ ಪ್ರಾರಂಭಿಸುವುದಾಗಿ ಅವರು ತಿಳಿಸಿದರು. ವಿಶೇಷವಾಗಿ ಕಟ್ಟಡಗಳಿಗೆ 250 ಕೋಟಿ ರೂ. ಬಜೆಟ್‍ನಲ್ಲಿ ಮೀಸಲಿಡುತ್ತೇವೆ. ವಿಶ್ವಬ್ಯಾಂಕ್ ಅವರ ಜತೆ ಸಭೆ ನಡೆಸಲು ಮುಂದಾಗಿದ್ದೇವೆ. ವಿಶ್ವಬ್ಯಾಂಕ್ ನಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯುವ ಕುರಿತು ಸಭೆ ನಡೆಸಲಿದ್ದೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

G.T.Devegowda universities ಕಾಲೇಜು ಉಪನ್ಯಾಸಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ