ದ್ವೇಷಕ್ಕೆ ಹೆಣವಾಗಿ ಹೋದ ಲಾರಿ ಚಾಲಕನೊಬ್ಬ

Horrific murder of a lorry driver

27-07-2018

ಬೆಂಗಳೂರು: ಡೀಸೆಲ್ ಕಳವು ಮಾಡುತ್ತಿದ್ದನ್ನು ಮಾಲೀಕರಿಗೆ ಹೇಳಿದ ಕಾರಣಕ್ಕೆ ಲಾರಿ ಚಾಲಕರೊಬ್ಬರು ಭೀಕರವಾಗಿ ಕೊಲೆಯಾಗಿರುವ ದುರ್ಘಟನೆ ನಗರದ ಹೊರವಲಯದ ನಂದಗುಡಿಯ ಬೀರಹಳ್ಳಿ ಬಳಿ ನಡೆದಿದೆ.

ಡೀಸೆಲ್ ಕಳವು ಮಾಡುತ್ತಿದ್ದನ್ನು ಮಾಲೀಕರಿಗೆ ಹೇಳಿದ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆಗೈದ ಲಾರಿ ಚಾಲಕನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ಶಂಕರ್(35) ಎಂದು ಗುರುತಿಸಲಾಗಿದೆ.

ಆಂಧ್ರ ಪ್ರದೇಶ ಮೂಲದ ಶಂಕರ್ ಬೀರಹಳ್ಳಿಯಲ್ಲಿ ಚನ್ನಕೇಶವ ಸ್ಟೋನ್ ಜಲ್ಲಿ ಕ್ರಷರ್‍ ನಲ್ಲಿ ಕಳೆದ ಒಂದು ವರ್ಷದಿಂದ ಶಂಕರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇದೇ ಕ್ರಷರ್‍ ನಲ್ಲಿ ಚಿಂತಾಮಣಿ ತಾಲ್ಲೂಕು ಬಟ್ಲಹಳ್ಳಿಯ ಶ್ರೀನಿವಾಸ್ ರೆಡ್ಡಿ ಉಸ್ತುವಾರಿ(ಇನ್‍ಚಾರ್ಜ್)ಯನ್ನಾಗಿ ನೇಮಿಸಲಾಗಿತ್ತು.

ಆದರೆ ಆತ ಲಾರಿಯಲ್ಲಿ ಡೀಸೆಲ್ ಕಳವು ಮಾಡುತ್ತಿದ್ದ ಇದನ್ನು ನೋಡಿದ ಚಾಲಕ ಶಂಕರ್ ಕ್ರಷರ್ ಮಾಲೀಕರಿಗೆ ವಿಷಯ ತಿಳಿಸಿದ್ದರು. ಕೂಡಲೇ ಶ್ರೀನಿವಾಸರೆಡ್ಡಿಯನ್ನು ಮಾಲೀಕರು ಕೆಲಸದಿಂದ ತೆಗೆದು ಹಾಕಿದ್ದರು. ಎರಡು ತಿಂಗಳ ಹಿಂದೆ ನಡೆದಿದ್ದ ಈ ಘಟನೆಯಿಂದ ಆಕ್ರೋಶಗೊಂಡಿದ್ದ ಶ್ರೀನಿವಾಸರೆಡ್ಡಿ ತನ್ನ ಸಹಚರರೊಂದಿಗೆ ನಿನ್ನೆ ರಾತ್ರಿ ಕ್ರಷರ್ ಕಂಪೆನಿಯ ಒಳಗೆ ವಾಸವಾಗಿದ್ದ ಶಂಕರನ್ನು ಹೊರಗೆ ಕರೆದು ರಾಡ್ ಸೇರಿ ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.

ಈ ಸಂಬಂಧ ಕೊಲೆಯಾದ ಶಂಕರ್ ಬಾಮೈದ ಪವನ್ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ಧಾವಿಸಿ ನಂದಗುಡಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೃತ್ಯವೆಸಗಿದ ಶ್ರೀನಿವಾಸರೆಡ್ಡಿ ಮತ್ತವನ ಸಹಚರರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder disel ನಂದಗುಡಿ ಕ್ರಷರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ