ಗ್ರಹಣದ ಬಗ್ಗೆ ಭಯಪಡಬೇಕಿಲ್ಲ, ನೋಡಿ ಖುಷಿ ಪಡಿ: ಮುರುಘಾ ಶ್ರೀ

shivamurthy murugha shri

27-07-2018

ದಾವಣಗೆರೆ: ಸೌರಮಂಡಲದಲ್ಲಿ ಇಂದಿನ ಚಂದ್ರ ಗ್ರಹಣ ಒಂದು ಸ್ವಾಭಾವಿಕ ಪ್ರಕ್ರಿಯೆ. ಇದು 21ನೇ ಶತಮಾನದ ಅಪೂರ್ವ ಕ್ಷಣ, ಇದನ್ನು ಎಲ್ಲರೂ ಕಣ್ತುಂಬಿಕೊಳ್ಳಬೇಕು, ಗ್ರಹಣ ನೋಡಿ ಖುಷಿ ಪಡಬೇಕಿದೆ ಎಂದು ಮುರುಘಾ ಶ್ರೀಗಳು ಹೇಳಿದ್ದಾರೆ.

ಗ್ರಹದ ಕುರಿತಂತೆ ದಾವಣಗೆರೆಯಲ್ಲಿ ಮಾತನಾಡಿದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಗ್ರಹಣದ ಬಗ್ಗೆ, ಜ್ಯೋತಿಷಿಗಳು ಏನೇನೋ ಹೇಳುತ್ತಿದ್ದಾರೆ. ಇದಕ್ಕೆ ಯಾರು ಭಯಪಡಬೇಕಿಲ್ಲ. ಗ್ರಹಣದ ವೇಳೆ ಶುಭ ಕೆಲಸಗಳನ್ನು ಮಾಡಬಹುದು. ಈ ಹಿನ್ನಲೆಯಲ್ಲಿ ರಾತ್ರಿ ಮಠದಲ್ಲಿ ದೀಕ್ಷೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಲ್ಲದೆ, ಕಲ್ಯಾಣ ಮಹೋತ್ಸವನ್ನು ನಡೆಸುತ್ತಿದ್ದೇವೆ ಇದಕ್ಕೆಲ್ಲ ಗ್ರಹಣ ಸಂಬಂಧವಿಲ್ಲ. ಭೂ ಪ್ರಳಯ, ಭೂಕಂಪನ ಇವೆಲ್ಲವು ನಿಸರ್ಗದ ಪ್ರಕ್ರಿಯೆ, ಇವಕ್ಕೆಲ್ಲ ಗ್ರಹಣವೇ ಕಾರಣವಲ್ಲ. ಹಿಂದೆ ಸೂರ್ಯ ಗ್ರಹಣದ ವೇಳೆಯೇ ಊಟ ಮಾಡಿದ್ದೆವು ಇದರಿಂದ ಯಾವುದೇ ಅಡ್ಡಪರಿಣಾಮಗಳಾಗಲಿಲ್ಲ. ಎಲ್ಲರೂ ಗೊಂದಲಗಳನ್ನು ಬಿಟ್ಟು ಯಾರ ಮಾತನ್ನು ನಂಬದೆ ಗ್ರಹಣ ವೀಕ್ಷಣೆ ಮಾಡಿ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಿ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

shivamurthy murugha eclipse ಸೂರ್ಯ ಗ್ರಹಣ ದೀಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ