ಅಪ್ರಾಪ್ತೆಯನ್ನು ಬೆದರಿಸಿ ರೇಪ್: ಕಾಮುಕನ ಬಂಧನ

Minior girl Rape: accuse arrested

27-07-2018

ಬೆಂಗಳೂರು: ಕ್ರೈಂ ಪೊಲೀಸ್ ಸೋಗಿನಲ್ಲಿ ಕಾರಿನಲ್ಲಿ ಬಂದು ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಮನೆಗೆ ಕರೆದೊಯ್ದು ರಿವಾಲ್ವರ್ ರೀತಿಯಲ್ಲಿದ್ದ ಸಿಗರೇಟ್ ಲೈಟರ್ ಅನ್ನು ಗನ್ ಎಂದು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದ ಕಾಮುಕ ಯಲಹಂಕ ಉಪನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ ಮೊಬೈಲ್ ಅಂಗಡಿ ಮಾಲೀಕ ಮಾರುತಿನಗರದ ಶ್ರೀನಾಥ್ (32)ನನ್ನು ಬಂಧಿಸಿರುವ ಯಲಹಂಕ ಉಪನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯಲಹಂಕ ಉಪನಗರದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಆರೋಪಿ ತನ್ನ ಸ್ನೇಹಿತನ ಮೂಲಕ ಕಾಲೇಜಿಗೆ ಹೋಗುತ್ತಿದ್ದ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಬಗ್ಗೆ ತಿಳಿದುಕೊಂಡಿದ್ದ,. ಆದರೆ, ವಿದ್ಯಾರ್ಥಿನಿಗೆ ಆರೋಪಿಯ ಬಗ್ಗೆ ಗೊತ್ತಿರಲಿಲ್ಲ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಕಳೆದ ಜುಲೈ 23ರಂದು ಕಾಲೇಜಿಗೆ ಹೋಗಿ ಮನೆಗೆ ಮಧ್ಯಾಹ್ನ 3ರ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿ ನಿರ್ಜನ ಪ್ರದೇಶದಲ್ಲಿ ನಾನು ಅಪರಾಧ ವಿಭಾಗದ ಪೊಲೀಸ್ ನಿಮ್ಮ ಜೊತೆ ಮಾತನಾಡಬೇಕಿದೆ ಎಂದು ಕಾರಿನಲ್ಲಿ ಕೂರಿಸಿಕೊಂಡು ಮಾರುತಿನಗರದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಗೆ ರಿವಾಲ್ವರ್ ರೀತಿಯ ಲೈಟರ್ ಅನ್ನು ಗನ್ ಎಂದು ಬೆದರಿಸಿ ಬಲತ್ಕಾರದಿಂದ ಅತ್ಯಾಚಾರ ಎಸಗಿ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿ ಮನೆಗೆ ಕಳುಹಿಸಿದ್ದಾನೆ.

ಮನೆಗೆ ಬಂದ ವಿದ್ಯಾರ್ಥಿನಿಯು ಮಂಕಾಗಿದ್ದನ್ನು ಕಂಡ ಪೋಷಕರು ವಿಚಾರಿಸಿದಾಗ ಮೊದಲಿಗೆ ಏನನ್ನೂ ಹೇಳದ ಆಕೆ, ಕೆಲ ಸಮಯದ ನಂತರ ಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ ಒಂದೆರಡು ದಿನ ಸುಮ್ಮನಿದ್ದ ಮನೆಯವರು ದೂರು ನೀಡಿದ್ದು ಪ್ರಕರಣ ದಾಖಲಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಕಾಮುಕನನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಮಾಹಿತಿ ಪಡೆದಿದ್ದಾರೆ. ಈಗಾಗಲೇ ವಿವಾಹವಾಗಿರುವ ಆರೋಪಿಯು ಪತ್ನಿಯಿಂದ ದೂರವಿದ್ದಾನೆ. ಬೆದರಿಕೆ, ಅಪಹರಣ ಹಾಗೂ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ