‘ಪ್ರತ್ಯೇಕತೆ ಕೂಗು ಹೆಚ್ಚಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ’

Basava Jaya Mruthyunjaya Swamiji reaction on uttara karnataka separation voice

27-07-2018

ದಾವಣಗೆರೆ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಹಿನ್ನೆಲೆ ದಾವಣಗೆರೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ‘ಪ್ರತ್ಯೇಕ ಕೂಗು ಹೆಚ್ಚಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ, ಅನ್ಯಾಯ, ನೋವಿನಿಂದ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ದಿ ಕುರಿತು ಇದೇ ತಿಂಗಳ 31ರಂದು ಉತ್ತರ ಕರ್ನಾಟಕದ ಸ್ವಾಮೀಜಿಗಳ ಸಭೆ ನಡೆಯಲಿದೆ ಎಂದರು.

ಈ ಪ್ರತಿಭಟನೆ ಜಾಸ್ತಿಯಾಗುವ ಮುನ್ನ ಸಂಬಂಧಪಟ್ಟವರು ನಿಗಾವಹಿಸಲಿ, ಅಖಂಡ ಕರ್ನಾಟಕ ನಿರ್ಮಾಣ ಮಾಡಿದವರೇ ಉತ್ತರ ಕರ್ನಾಟಕದವರು, ತಾಳ್ಮೆ ಪರೀಕ್ಷೆ ಮಾಡದೆ ಸಮಸ್ಯೆ ಸರಿಪಡಿಸಲಿ. ಬೆಳಗಾವಿ 2ನೇ ರಾಜಧಾನಿಯಾಗಲಿ, 20 ಮುಖ್ಯ ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ವಿಕೇಂದ್ರೀಕೃತವಾಗಲಿ, ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದರೆ ಪ್ರತ್ಯೇಕತೆ ಕೂಗು ಶಮನವಾಗುತ್ತದೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ