ಕುಡಿದ ಮತ್ತಲ್ಲಿ ಪೊಲೀಸ್ ಪೇದೆ ಅವಾಂತರ: ಸರಣಿ ಅಪಘಾತ

Serial accident has happened because of a drunken policeman

27-07-2018

ಬೆಂಗಳೂರು: ನಗರದ ಹೊರವಲಯದ ಆನೇಕಲ್‍ ನ ಸಿಂಗಸಂದ್ರ ಬಳಿ ರಾಜ್ಯ ಮೀಸಲು ಪಡೆಯ (ಕೆಎಸ್‍ಆರ್ಪಿ) ಪೊಲೀಸ್ ಪೇದೆಯೊಬ್ಬ ಕುಡಿದ ಮತ್ತಿನಲ್ಲಿ ಪೊಲೀಸ್ ವ್ಯಾನ್‍ ನನ್ನು ಅಡ್ಡಾದಿಡ್ಡಿ ಚಲಾಯಿಸಿದ್ದರಿಂದ ಸರಣಿ ಅಪಘಾತ ಸಂಭವಿಸಿದೆ.

ಹೊಸೂರು ಮುಖ್ಯರಸ್ತೆಯ ಸಿಂಗಸಂದ್ರ ಬಳಿ ಕೆ.ಎಸ್.ಆರ್.ಪಿ 9ನೇ ಪಡೆಯ ಚಾಲಕ ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿಯಾಗಿ ಇಲಾಖೆಯ ವ್ಯಾನ್ ಚಲಾಯಿಸಿದ ಪರಿಣಾಮ ಸರಣಿ ಅಪಘಾತವಾಗಿದ್ದು,  ಒಂದು ಕಾರು ಹಾಗೂ ಬೈಕ್ ಜಖಂಗೊಂಡಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸ್ಥಳದಲ್ಲಿದ್ದ ಸಾರ್ವಜನಿಕರು ಕುಡುಕ ಪೊಲೀಸ್ ಪೇದೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಸಂಚಾರ ಪೊಲೀಸರು ಆಗಮಿಸಿ ಕುಡುಕ ಪೊಲೀಸ್ ಪೇದೆಯನ್ನು ವ್ಯಾನ್ ರಸ್ತೆ ಪಕ್ಕಕ್ಕೆ ಹಾಕುವಂತೆ ವಿನಂತಿಸಿಕೊಳ್ಳುತ್ತಿದ್ದ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

police constable Drunk ಮೊಬೈಲ್‍ ಸಾರ್ವಜನಿಕರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ