ಸುಳ್ಳು ಭವಿಷ್ಯ ಹೇಳುತ್ತಿದ್ದಾನೆಂದು ಜ್ಯೋತಿಷಿಗೆ ಚಾಕು ಇರಿತ!

An astrologer assaulted by a man

27-07-2018

ಹುಬ್ಬಳ್ಳಿ: ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಸುಳ್ಳು ಭವಿಷ್ಯ ಹೇಳುತ್ತಿದ್ದಾನೆಂದು ಜ್ಯೋತಿಷಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಸುಳ್ಳು ಭವಿಷ್ಯ ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿ ಜ್ಯೋತಿಷಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉಣಕಲ್ ನಿವಾಸಿ ಪುಂಡಲೀಕ ಎಂಬ ಜ್ಯೋತಿಷಿ ಮೇಲೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ವ್ಯಕ್ತಿ ಹಲ್ಲೆ‌ ಮಾಡಿದ್ದಾರೆ. ಕಿವಿ ಮತ್ತು ದೇಹದ ಇತರೆಡೆ ಚಾಕುವಿನಿಂದ ಇರಿಯಲಾಗಿದ್ದು, ತೀವ್ರ ರಕ್ತ ಸ್ರಾವದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಕು ಇರಿದ ಅಪರಿಚಿತ ವ್ಯಕ್ತಿಯನ್ನು ಉಪನಗರ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ