ಸೆಟ್ಟೇರುವ ಮೊದಲೇ ‘ಒಡೆಯರ್’ ಗೆ ಅಪಸ್ವರ!

A case filed against darshan movie

27-07-2018

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಇನ್ನೂ ಸೆಟ್ಟೇರದ ಚಿತ್ರ, ಸೆಟ್ಟೇರುವ ಮುನ್ನವೇ ಸಂಕಷ್ಟ ಎದುರಾಗಿದೆ. ಚಿತ್ರದ ವಿರುದ್ಧ ಅಪಸ್ವರ ಎದ್ದಿದೆ. ದರ್ಶನ್ ಅವರ ‘ಒಡೆಯರ್’ ಹೆಸರಿನ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ, ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡ ಕ್ರಾಂತಿದಳ ವೇದಿಕೆ ಚಿತ್ರದ ವಿರುದ್ಧ ದೂರು ನೀಡಿದೆ. ಒಡೆಯರ್ ಹೆಸರಿನಲ್ಲಿ ಚಿತ್ರ ಮಾಡದಂತೆ ಆಗ್ರಹಿಸಿದೆ ಸಂಘಟನೆ. ‘ಒಡೆಯರ್ ಹೆಸರು ಬಳಕೆಯಾದರೆ ಚರಿತ್ರೆಯ ಚಿತ್ರ ಮಾಡಲಿ. ಅದು ಬಿಟ್ಟು ಐಟಂ ಸಾಂಗ್, ಲವ್, ಹಾಸ್ಯಭರಿತ ಚಿತ್ರವಾದರೆ ಬೇಡ'  ಎಂದಿದ್ದಾರೆ. ಒಂದು ವೇಳೆ ಈ ರೀತಿ ಚಿತ್ರ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ತಿಂಗಳು ಅದ್ಧೂರಿಯಾಗಿ ಸೆಟ್ಟೇರಲಿದೆ ಚಿತ್ರ. ಚರಿತ್ರೆಯ ಚಿತ್ರ ಆಗದಿದ್ದಲ್ಲಿ ಚಿತ್ರೀಕರಣದ ಜಾಗಕ್ಕೆ ನುಗ್ಗಿ ಮುತ್ತಿಗೆ ಹಾಕಿ, ಚಿತ್ರ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಕ್ರಾಂತಿದಳಕ್ಕೆ ಅರಸು ಯುವಜನ ವೇದಿಕೆ ಸಾಥ್ ನೀಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ