ಹೇಮಾವತಿ ಜಲಾಶಯಕ್ಕೆ ಆದಿಚುಂಚನಗಿರಿ ಶ್ರೀ ಭೇಟಿ

Nirmalananda Swamiji visited to hemavathi dam

27-07-2018

ಹಾಸನ: ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಹಾಸನ ತಾಲ್ಲೂಕಿನ ಗೊರೂರು ಹೇಮಾವತಿ ಜಲಾಶಯಕ್ಕೆ ಭೇಟಿ ಕೊಟ್ಟು ಜಲಾಶಯದ ಸೊಬಗನ್ನ ನೋಡಿ ಕಣ್ತುಂಬಿಕೊಂಡರು. ಜಿಲ್ಲೆಯ ಅರಕಲಗೂಡಿಗೆ ಕಾರ್ಯಕ್ರಮ ನಿಮಿತ್ತ ಹೊರಟಿದ್ದ ಅವರು, ಮಾರ್ಗಮಧ್ಯೆ ತುಂಬಿ ಹರಿಯುತ್ತಿದ್ದ ಹೇಮಾವತಿ ಜಲಾಶಯವನ್ನು ವೀಕ್ಷಿಸಿದರು. 4 ವರ್ಷದ ಬಳಿಕ ತುಂಬಿರುವ ಅಣೆಕಟ್ಟನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಜಲಾಶಯದ ಮಾಹಿತಿ ಪಡೆದರು. ಕ್ರಸ್ಟ್ ಗೇಟ್ ಮೇಲ್ಭಾಗಕ್ಕೆ ತೆರಳಿ ಹೊರ ಬಿಟ್ಟಿದ್ದ ನೀರಿನ ಮನಮೊಹಕ ದೃಶ್ಯಕಂಡು ಪುಳಕಿತರಾದರು. ಈ ವೇಳೆ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರ ಸ್ವಾಮೀಜಿಯೂ ಜೊತೆಯಲ್ಲಿದ್ದರು.


ಸಂಬಂಧಿತ ಟ್ಯಾಗ್ಗಳು

Nirmalananda Swamiji Adichunchanagiri ಹೇಮಾವತಿ ಜಲಾಶಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ