ಉ.ಕ.ಪ್ರತ್ಯೇಕ ರಾಜ್ಯ ಪರ ಶ್ರೀರಾಮುಲು ಪರೋಕ್ಷ ಬ್ಯಾಟಿಂಗ್!

MLA Sriramulu comment on uttarakarnataka separation

27-07-2018

ಬಳ್ಳಾರಿ: 'ಸಿಎಂ ಕುಮಾರಸ್ವಾಮಿಯವರು ಪದೇ ಪದೇ ಉತ್ತರ ಕರ್ನಾಟಕ ಜನ ಹಾಗೂ ರೈತರನ್ನು ಕೆಣಕುತ್ತಿದ್ದಾರೆ' ಎಂದು ಹೇಳುವ ಮೂಲಕ, ಪರೋಕ್ಷವಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರ ಬ್ಯಾಟಿಂಗ್ ಮಾಡಿದ್ದಾರೆ ಶಾಸಕ ಶ್ರೀರಾಮುಲು.

ಬಳ್ಳಾರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸೀಟುಗಳು ಹೆಚ್ಚು ಬರಲಿಲ್ಲ ಎಂದು ಈ ರೀತಿ ನಿರ್ಲಕ್ಷ್ಯಮಾಡುತ್ತಿದ್ದಾರೆ. ಕೊಪ್ಪಳದ ರೈತ ಸಾಲಮನ್ನಾ ಮಾಡಬೇಕು ಎಂದು ಹೋರಾಟ ಮಾಡಿದರೆ, ಸಮಾಧಾನವಾಗಿ ಉತ್ತರ ನೀಡಬೇಕು, ಅದನ್ನು ಬಿಟ್ಟು‌ ಜನರಿಗೆ ಮತವನ್ನು ಹಣ, ಜಾತಿಗಾಗಿ ಮಾರಿಕೊಂಡಿದ್ದಿರಬೇಕೆಂದು ಹೇಳುತ್ತೀರಿ, ನಮ್ಮ ಉತ್ತರ ಕರ್ನಾಟಕದ ಜನ ಮತವನ್ನು ಮಾರಿಕೊಳ್ಳುವವರಲ್ಲ. ನೀವು ರಾಜ್ಯದ ಸಿಎಂ ನಾ ಅಥವಾ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಸಿಎಂ ನಾ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಭಾಗಕ್ಕೆ ಬಜೆಟ್ ನಲ್ಲಿ ನಿರ್ಲಕ್ಷ್ಯ ಮಾಡಿದ್ದೀರಿ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಜನರನ್ನು ನಿರ್ಲಕ್ಷ್ಯಮಾಡಿದ್ದೀರಿ, ಸೇಡಿನ ರಾಜಕಾರಣ ಮಾಡುತ್ತಿದ್ದೀರಾ ಎಂದು ಟೀಕೆ ಮಾಡಿದ್ದಾರೆ.

ಸಿಎಂ ತಾರತಮ್ಯ ಮಾಡುತ್ತಿದ್ದಾರೆ. ಸಾಲಾಮನ್ನಾ ವಿಚಾರವಾಗಿ ನಾಟಕಮಾಡಿದ್ದೀರಿ, ಸಾಲಾ ಮನ್ನಾ ಘೋಷಣೆ ನಂತರ ಸರಕಾರ ಅಧಿಸೂಚನೆ ಹೊರಡಿಸಿಲ್ಲ, ಮತ ಹಾಕುವ ಸಮಯದಲ್ಲಿ ಜೆಡಿಎಸ್ ನೆನಪಾಗಲಿಲ್ಲವಾ ಎಂದು ರೈತರನ್ನೇ ಪ್ರಶ್ನೆ ಮಾಡ್ತಿರಾ? ಬಹುಶಃ ಯಾವ ಸಿಎಂ ಕೂಡ ತರದ ಮಾತುಗಳನ್ನು ಹೇಳಿಲ್ಲ' ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ