ಶತಮಾನದ ಅತಿ ಸುದೀರ್ಘ ಚಂದ್ರ ಗ್ರಹಣ

Longest lunar eclipse of the 21st century

27-07-2018

ಬೆಂಗಳೂರು: ಇಂದು ನಭೋಮಂಡಲದಲ್ಲಿ ಶತಮಾನದ ಅತಿ ಸುದೀರ್ಘ ಚಂದ್ರ ಗ್ರಹಣ ಸಂಭವಿಸಲಿದೆ. ‘ಕೆಂಪು’ ಚಂದ್ರ ಗ್ರಹಣ ಇಂದು ರಾತ್ರಿ 11.44ಕ್ಕೆ ಆರಂಭಗೊಂಡು ಶನಿವಾರ ಬೆಳಗ್ಗಿನ ಜಾವ 3.48 ಕ್ಕೆ ಮುಗಿಯುತ್ತದೆ. ಚಂದ್ರ ಗ್ರಹಣ ಹಿನ್ನೆಲೆ ಇಂದು ಸಂಜೆ ವೇಳೆಗೆ ಪ್ರಮುಖ ದೇವಾಲಯಗಳಿಗೆ ಭಕ್ತರಿಗೆ ದರ್ಶನ ನಿಷೇಧಿಸಲಾಗಿದೆ. ಬೆಂಗಳೂರಿನಲ್ಲಿನ ಲಕ್ಷ್ಮೀನರಸಿಂಹ, ಕಾಡು ಮಲ್ಲಿಕಾರ್ಜುನ, ಗಂಗಮ್ಮ ದೇವಿ ದೇವಸ್ಥಾನ ಸೇರಿಂದತೆ ಹಲವು ದೇವಾಲಯಗಳು ಸಂಜೆ ವೇಳೆಗೆ ಬಂದ್ ಆಗಲಿವೆ.  

ಕೇತುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ ಚಾಮರಾಜಪೇಟೆಯ ಬಂಡಿ ಮಹಾಂಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿವೆ. ಗುರು ಪೌರ್ಣಮಿ ಮತ್ತು ಚಂದ್ರ ಗ್ರಹಣವಾಗಿದ್ದು  ಭಕ್ತರು ಸಾಲುಗಟ್ಟಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ದೇವಸ್ಥಾಸನದಲ್ಲಿ ಹೋಮ, ಪಂಚಾಮೃತ ಅಭಿಷೇಕಗಳು ನಡೆಯುತ್ತಿವೆ.


ಸಂಬಂಧಿತ ಟ್ಯಾಗ್ಗಳು

lunar eclipse Temples ಪಂಚಾಮೃತ ನಭೋಮಂಡಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ