ಗೌರಿ ಹತ್ಯೆ: ಮತ್ತೊಬ್ಬನನ್ನು ವಶಕ್ಕೆ ಪಡೆದ ಎಸ್ಐಟಿ

one person arrested from SIT: related to gauri murder

27-07-2018

ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯಾ ಪ್ರಕರಣ ಸಂಬಂಧ ಎಸ್‍ಐಟಿ ಮತ್ತೋರ್ವ ಆರೋಪಿಯನ್ನು ಬುಧವಾರ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಸೀಗೆಹಳ್ಳಿಯ ಸುರೇಶ್ ಎಂಬಾತನನ್ನು ಗೌರಿಲಂಕೇಶ್ ಹತ್ಯೆಗೈದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ಎಸ್‍ಐಟಿ ವಶಕ್ಕೆ ಪಡೆದಿದ್ದಾರೆ.

ಗೌರಿ ಲಂಕೇಶ್ ಪ್ರಕರಣದಲ್ಲಿ ಎಸ್‍ಐಟಿ ವಶಕ್ಕೆ ಪಡೆದಿರುವ ಆರೋಪಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಅಮುಲ್ ಕಾಳೆ, ಪರಶುರಾಮ್ ವಾಘ್ಮೋರೆ, ಮದ್ದೂರಿನ ನವೀನ್‍ ಕುಮಾರ್, ಮೋಹನ್ ನಾಯಕ್, ರಾಜೇಶ್ ಬಂಗೇರಾ ಸೇರಿದಂತೆ ಈವರೆಗೂ 10 ಆರೋಪಿಗಳನ್ನು ಬಂಧಿಸಲಾಗಿದೆ.

ನಿನ್ನೆ ಎಸ್‍ಐಟಿ ವಶಕ್ಕೆ ಪಡೆದ ಸುರೇಶ್, ಮಹಾರಾಷ್ಟ್ರದ ಪುಣೆ ನಿವಾಸಿ ಅಮೂಲ್ ಕಾಳೆ ಸೇರಿದಂತೆ ಮತ್ತಿತರಿಗೆ ಆಶ್ರಯ ನೀಡಿದ ಆರೋಪವಿದೆ. ಇವರೆಲ್ಲರೂ ಗೌರಿ ಲಂಕೇಶ್ ಹತ್ಯೆಗೈಯಲು ಸಂಚು ರೂಪಿಸಿದ್ದು ಈತನ ಗಮನಕ್ಕೆ ಬಂದಿತ್ತು ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹತ್ಯೆಗೈಯ್ಯುವ ಮುನ್ನ ಇವರೆಲ್ಲರಿಗೂ ಸುರೇಶ್ ಆಶ್ರಯ ಒದಗಿಸಿದ್ದ ಎಂದು ತಿಳಿದುಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ