ಕುಖ್ಯಾತ ಸುಲಿಗೆಕೋರ ಸಿಡಿ ಇಮ್ರಾನ್ ಅರೆಸ್ಟ್

Imran alias CD Imran Arrest

26-07-2018

ಬೆಂಗಳೂರು: ಕಳವು ಮಾಡಿದ ಬೈಕ್‌ ನಲ್ಲಿ ಸುತ್ತಾಡುತ್ತ ಸರಗಳವು ಹಾಗೂ ಸುಲಿಗೆ ಮಾಡುತ್ತಿದ್ದ ಹಳೆಕಳ್ಳನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿ 3 ಪಲ್ಸರ್ ಬೈಕ್‌ಗಳು 95 ಗ್ರಾಂ. ತೂಕದ 2 ಚಿನ್ನದ ಸರಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಡುಗೊಂಡನಹಳ್ಳಿಯ ಇಮ್ರಾನ್ ಅಲಿಯಾಸ್ ಸಿಡಿ ಇಮ್ರಾನ್ (30) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 95 ಗ್ರಾಂ.ತೂಕದ 2 ಚಿನ್ನದ ಸರಗಳು, 3 ಪಲ್ಸರ್ ಬೈಕ್‌ಗಳು ಸೇರಿ ಮೂರೂವರೆ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಕಳವು ಮಾಡಿದ ಬೈಕ್‌ ಗಳಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳವು ಮಾಡುತ್ತಿದ್ದ. ಅಲ್ಲದೆ, ಸ್ಕೂಟರ್‌ ಗಳಲ್ಲಿ ದಿನನಿತ್ಯದ ಸಾಮಗ್ರಿಗಳನ್ನು ಅಂಗಡಿಗಳಿಗೆ ಸರಬರಾಜು ಮಾಡುವ ವ್ಯಾಪಾರಿಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ  ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

ಕಳೆದ ಮೇ 29ರಂದು ಸೃಜನಿ ಏಜೆನ್ಸಿಯ ಶ್ಯಾಂ ಕಿರಣ್ ಅವರು ಅಂಗಡಿಗಳಿಗೆ ದಿನನಿತ್ಯದ ಸಾಮಗ್ರಿಗಳನ್ನು ಸರಬರಾಜು ಮಾಡಿ ಟಿವಿಎಸ್ ಸ್ಕೂಟರ್‌ ನಲ್ಲಿ ಸಂಪಿಗೆ ಹಳ್ಳಿಯಿಂದ ಅಗ್ರಹಾರಕ್ಕೆ ಬರುತ್ತಿದ್ದಾಗ ಅಡ್ಡಗಟ್ಟಿ ಬ್ಯಾಗ್ ಕೊಡುವಂತೆ ಕೇಳಿದ್ದು, ಅವರು ನಿರಾಕರಿಸಿದಾಗ ಚಾಕುವಿನಿಂದ ಹಲ್ಲೆ ನಡೆಸಿ 30 ಸಾವಿರ ಹಣವಿದ್ದ ಬ್ಯಾಗ್ ಹಾಗೂ ಮೊಬೈಲ್‌ನ್ನು ಕಸಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಕೃತ್ಯದಲ್ಲಿ ಇನ್ನು ಮೂವರು ಭಾಗಿಯಾಗಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗಿದೆ. ಬಂಧಿತ ಆರೋಪಿ ಇಮ್ರಾನ್, ಬಾಗಲೂರು ಹಾಗೂ ಸಂಪಿಗೆಹಳ್ಳಿಯಲ್ಲಿ ಸರಗಳವು ಮಾಡಿದ್ದ 70 ಹಾಗೂ 25 ಗ್ರಾಂ.ಚಿನ್ನದ ಸರ ಸೇರಿ 95 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ಆರೋಪಿಯು ಹಿಂದೆ ರಾಮಮೂರ್ತಿ ನಗರ ಹಾಗೂ ಮಂಡ್ಯದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಾರೆಂಟ್ ಎದುರಿಸುತ್ತಿದ್ದಾನೆ. ಆದರೂ ನ್ಯಾಯಾಲಯಕ್ಕೆ ಹಾಜರಾಗದೆ ಕಳ್ಳತನ ಕೃತ್ಯದಲ್ಲಿ ತೊಡಗಿದ್ದ ಎಂದು ಅವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

arrest Robbery ನ್ಯಾಯಾಲಯ ವಾರೆಂಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ