ಎತ್ತುಗಳಿಗೆ ಬೆತ್ತದಿಂದ ಬರೆ: ಇದೆಂಥಾ ಆಚರಣೆ

unique celebration in a village: violation animal protection act

26-07-2018

ಬೆಳಗಾವಿ: ರಾಜ್ಯದಲ್ಲಿ ಇನ್ನು ಜೀವಂತವಾಗಿದೆ ಮೌಢ್ಯಾಚರಣೆ. ಇದಕ್ಕೆ ನಿದರ್ಶನವೆಂಬಂತೆ ವಿಚಿತ್ರ ಆಚೆಣೆಯೊಂದು ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕಾಗವಾಡ ಪಟ್ಟಣದಲ್ಲಿ ಎತ್ತುಗಳ ಮೇಲೆ ಬೆತ್ತದಿಂದ 100ಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿದ ವಿಚಿತ್ರ ಆಚರಣೆ ಕಂಡುಬಂದಿದೆ. ಎತ್ತುಗಳು, ಹಸುಗಳನ್ನು ಮುಳ್ಳಿನ ಕಂಟುಗಳ ಮೇಲೆ ಓಡಿಸಿ ಮೂಕ ಪ್ರಾಣಿಗಳಿಗೆ ಚಿತ್ರ ಹಿಂಸೆ ನೀಡಿದ್ದಾರೆ. ಈ ರೀತಿಯ ಕೆಟ್ಟ ಮೌಢ್ಯಾಚರಣೆ ಪೊಲೀಸರ ಸಮ್ಮುಖದಲ್ಲೇ ನಡೆಯುತ್ತಿದ್ದರೂ ಕಂಡು ಕಾಣದಂತಿದ್ದಾರೆ ಪೊಲೀಸರು.

ಉತ್ತರ ಕರ್ನಾಟಕದ ಪ್ರಮುಖ ಹಬ್ಬ ಕಾರಹುಣ್ಣಿಮೆಯ ನಿಮಿತ್ತ ಈ ರೀತಿಯ ಆಚರಣೆ ನಡೆದಿದೆ. ಪ್ರತಿವರ್ಷವೂ ಇದೇ ರೀತಿ ಇಲ್ಲಿ ಮೌಢ್ಯಾಚರಣೆ ನಡೆಯುತ್ತಿದ್ದು, ಅಪ್ರಾಪ್ತ ಮಕ್ಕಳಿಗೂ ಸಹ ಬೇವಿನ ನೋಪ್ಪು ತೊಡಿಸುವ ಅಂಧಾಚರಣೆ ಕೂಡ ನಡೆದುಕೊಂಡು ಬಂದಿದೆ. ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಕೆಂಬುದು ಹಲವರ ಒತ್ತಾಯವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ