ನಕಲಿ ಪಾಸ್ ಪೋರ್ಟ್: ಯುವತಿಯೊಬ್ಬಳ ಬಂಧನ

Duplicate passport: police arrested a woman in airport

26-07-2018

ಬೆಂಗಳೂರು: ಅರಬ್ ದೇಶದ ಶಾರ್ಜಾಕ್ಕೆ ನಕಲಿ ಪಾಸ್‌ ಪೋರ್ಟ್ ಬಳಸಿ ವಿಮಾನದ ಮೂಲಕ ಹಾರಲು ಯತ್ನಿಸಿದ್ದ ನೇಪಾಳ ಮೂಲದ ಯುವತಿಯೊಬ್ಬಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ನೇಪಾಳ ಮೂಲದ ಟಮಾಂಗ್ ರಬೀನಾ (22) ಬಂಧಿತ ಆರೋಪಿಯಾಗಿದ್ದಾಳೆ. ಬೆಂಗಳೂರಿನಿಂದ ಶಾರ್ಜಾಗೆ ತೆರಳುತ್ತಿದ್ದ ರಬೀನಾಳನ್ನು ಇಮಿಗ್ರೇಷನ್‌ಕ್ಲಿಯರೆನ್ಸ್ ನವರು(ವಲಸೆ ವಿಭಾಗ) ಪಾಸ್‌ ಪೋರ್ಟ್ ಪರಿಶೀಲಿಸಿದಾಗ ಅದು ನಕಲಿ ಎಂದು ಅಧಿಕಾರಿಗಳಿಗೆ ಅನುಮಾನ ಬಂದಿದೆ.

ಕೂಡಲೇ ನೇಪಾಳದ ಎಂಬಸಿಗೆ ಕರೆ ಮಾಡಿ ವಿಚಾರಿಸಿದಾಗ ರಬೀನಾ ಬಳಿಯಿರುವುದು ನಕಲಿ ಪಾಸ್‌ ಪೋರ್ಟ್‌ಎಂಬುದು ಖಚಿತಗೊಂಡಿದೆ. ಯುವತಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Passport Nepal ಯುವತಿ ವಿಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ