ಶಿರೂರು ಶ್ರೀಗಳ ಕೋಣೆ ತಿಪ್ಪೆಗುಂಡಿ!?

Shiroor Mutt swamiji room and controversies

26-07-2018

ಇತ್ತೀಚೆಗೆ ಅಸಹಜ ಎನ್ನುವಂತಾ ರೀತಿಯಲ್ಲಿ ಸಾವನ್ನಪ್ಪಿದ ಉಡುಪಿಯ ಶಿರೂರು ಮಠದ ಶ್ರೀಗಳ ಸಾವಿನ ಹಿಂದೆಯೇ ಅವರ ಬಗ್ಗೆ ಇದ್ದ ಅನುಮಾನಗಳು ನಿಜವಾಗುತ್ತಾ ಬರುತ್ತಿರುವುದು ಯಾರಿಗಲ್ಲದಿದ್ದರೂ ಅವರ ಭಕ್ತವೃಂದಕ್ಕಂತೂ ಬಹಳಷ್ಟು ಆಘಾತವನ್ನುಂಟು ಮಾಡಿದೆ. ಶ್ರೀಗಳ ಸಾವಿನ ನಂತರ ಅವರ ಮಠದಲ್ಲಿ ಮದ್ಯದ ಬಾಟಲಿಗಳು ಲಭ್ಯವಾದವು ಮತ್ತು ಇನ್ನಿತರ ಅನೈತಿಕ ಚಟುವಟಿಕೆಗಳ ಕುರುಹುಗಳಿದ್ದವು ಎಂಬ ವರದಿ ಬಂದಿದ್ದರೂ ಅವೆಲ್ಲ ಇನ್ನೂ ಸಾಬೀತಾಗಿಲ್ಲ. ಆದರೂ ಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬೆರೆಯುತ್ತಿದ್ದ ಶ್ರೀಗಳು ಸಾಮಾನ್ಯ ಜನರಿಗೆ ಪ್ರೀತಿಪಾತ್ರರಾಗಿದ್ದರು. ಆದರೆ, ಅವರ ಆ ಸಾಮಾನ್ಯ ನಡವಳಿಕೆ ಅವರನ್ನು ಸನ್ಯಾಸತ್ವದಿಂದ ಮತ್ತು ಸಭ್ಯಜೀವನದಿಂದ ವಿಚಲಿತರಾಗುವಂತೆ ಮಾಡಿದ್ದು ಎಂದು ಹೇಳಲಾಗುತ್ತಿದೆ. ಆದರೆ ಅದರೊಂದಿಗೆ ಅವರ ಜೀವನಶೈಲಿ ಕೂಡ ಸನ್ಯಾಸಿಗೆ ಸೂಕ್ತವಾದಂತದ್ದಾಗಿರಲಿಲ್ಲ ಎಂಬುದು ಅವರ ಮೇಲಿನ ಅಪವಾದವಾಗಿತ್ತು. ಶಿರೂರು ಶ್ರೀಗಳು ತಮ್ಮ ಹೆಸರನ್ನು, ವ್ಯಕ್ತಿತ್ವವನ್ನು ಪ್ರಶ್ನಾರ್ಥ ಮಾಡಿಕೊಂಡಿದ್ದು ಮಾತ್ರವಲ್ಲದೇ ಅದರೊಂದಿಗೆ ತಮ್ಮ ಮಠವನ್ನು ಅಸಭ್ಯ ರೀತಿಯಲ್ಲಿಟ್ಟುಕೊಂಡಿದ್ದಾರೆಂಬ ಆರೋಪವಿತ್ತು. ಆದರೆ, ಅದನ್ನೆಲ್ಲಾ ಸಾಬೀತಾಗುವಂತೆ ಶ್ರೀಗಳ ಸಾವಿನ ನಂತರ ಅವರ ಮಠಕ್ಕೆ ಭೇಟಿಕೊಟ್ಟ ಪೊಲೀಸರು ಶ್ರೀಗಳು ವಾಸಿಸುತ್ತಿದ್ದ ಕೋಣೆಯನ್ನು ಪ್ರವೇಶಿಸಿದಾಗ ಅವರಿಗೆ ದಿಗಿಲಾಗುವಂತೆ ಆ ಕೋಣೆಯಲ್ಲಿ ಏನಿರಬಾರದು ಅದೆಲ್ಲಾ ಶಿರೂರು ಸ್ವಾಮಿಗಳ ಕೋಣೆಯಲ್ಲಿ ಇತ್ತು ಎಂದು ಪೊಲೀಸರು ಹೇಳಿಕೊಂಡಿದ್ದಾರಂತೆ. ಹಾಗೆಯೇ ಒಬ್ಬ ಸ್ವಾಮಿಜೀಯ ಕೋಣೆ ಶುಭ್ರವಾಗಿರತ್ತೆ, ಅಚ್ಚುಕಟ್ಟಾಗಿರತ್ತೆ ಎಂದುಕೊಂಡು ಹೋದ ಪೊಲೀಸರಿಗೆ ಶಿರೂರು ಸ್ವಾಮಿಗಳ ಕೋಣೆ ತಿಪ್ಪೆಗುಂಡಿಯಂತೆ ಕಂಡುಬಂದಿದ್ದು ಆ ಪೊಲೀಸರನ್ನು ಅಧೀರರನ್ನಾಗಿ ಮಾಡಿಬಿಟ್ಟಿದೆ. ಇದನ್ನೆಲ್ಲಾ ನೋಡಿದ ಪೊಲೀಸರು ಇನ್ನೇನೆಲ್ಲಾ ನೋಡಬೇಕಾಗಿದೆಯೋ ಕೃಷ್ಣ ಕೃಷ್ಣಾ ಎಂದು ಹೇಳಿಕೊಂಡಿದ್ದಾರಂತೆ.


ಸಂಬಂಧಿತ ಟ್ಯಾಗ್ಗಳು

Lakshmivara Tirtha Shiroor Mutt ಕೃಷ್ಣ ಸಾಮಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ