ಮಹಿಳೆ ಅಡ್ಡಗಟ್ಟಿ ಹಣ ಕಸಿದು ದುಷ್ಕರ್ಮಿಗಳು ಪರಾರಿ

2 lakhs of money robbed with a women near atm

26-07-2018

ಬೆಂಗಳೂರು: ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಬ್ಯಾಂಕ್‌ ನಿಂದ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು 2 ಲಕ್ಷ ರೂ. ಕಸಿದು ಪರಾರಿಯಾಗಿರುವ ದುರ್ಘಟನೆ ನಡೆದಿದೆ.

ಬಾಣಸವಾಡಿಯ ಮುಖ್ಯರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ 2 ಲಕ್ಷ ಹಣವನ್ನು ನಿನ್ನೆ ಬೆಳಿಗ್ಗೆ 11.30ರ ವೇಳೆ ಡ್ರಾ ಮಾಡಿಕೊಂಡ ದಿವ್ಯಾ ಅವರು ಹೊರ ಬಂದು ನಡೆದು ಹೋಗುತ್ತಿದ್ದಾಗ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಹಣವಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ.

ಕೆಜಿ ಹಳ್ಳಿಯ ದಿವ್ಯಾ ಅವರು ಕೆಲಸಗಾರರಿಗೆ ಹಣ ಕೊಡಲು ಚೆಕ್ ತಂದು ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಪ್ರಕರಣ ದಾಖಲಿಸಿರುವ ಬಾಣಸವಾಡಿ ಪೊಲೀಸರು ಬ್ಯಾಂಕ್ ಮುಂಭಾಗದ ಸಿಸಿಟಿವಿಯಲ್ಲಿನ ದುಷ್ಕೃತ್ಯದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.

 

 

 

 


ಸಂಬಂಧಿತ ಟ್ಯಾಗ್ಗಳು

women Robbery ಸಿಸಿಟಿವಿ ದೃಶ್ಯಾವಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ