ಸೊಗಡು ಶಿವಣ್ಣ ಕಾರು ಅಪಘಾತದಿಂದ ಪಾರು!

sogadu shivanna complaint lodged against a bus driver

26-07-2018

ತುಮಕೂರು:  ಮಾಜಿ ಸಚಿವ ಸೊಗಡು ಶಿವಣ್ಣ ಅವರು ಕೂದಲೆಳೆ ಅಂತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೊಗಡು ಶಿವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್ ನಡುವೆ ಅಪಘಾತ ಸ್ಪಲ್ಪದರಲ್ಲೇ ತಪ್ಪಿದೆ. ತುಮಕೂರು ನಗರದ ಸ್ವಾತಂತ್ರ್ಯ ಚೌಕದ ಬಳಿ ಘಟನೆ ನಡೆದಿದೆ. ಸೊಗಡು ಶಿವಣ್ಣ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವಂತೆ ವೇಗವಾಗಿ ನುಗ್ಗಿ ಬಂದಿದೆ ಖಾಸಗಿ ಬಸ್. ಮದುಗಿರಿ ಕಡೆಯಿಂದ ಬರುತ್ತಿದ್ದ ಕೆಎ 25 ಸಿ 4083 ನಂಬರಿನ ಖಾಸಗಿ ಬಸ್, ನಗರದಿಂದ ಮನೆಗೆ ತೆರಳುತ್ತಿದ್ದ ಸೊಗಡು ಶಿವಣ್ಣ ಕಾರಿಗೆ ಡಿಕ್ಕಿ ಹೊಡೆಯುವಂತೆ ಬಂದಿದೆ, ಆದರೆ ಕ್ಷಣಾರ್ಥದಲ್ಲಿ ಅಪಘಾತದ ದವಡೆಯಿಂದ ಪಾರಾಗಿದ್ದಾರೆ ಸೊಗಡು ಶಿವಣ್ಣ.

ಅತಿವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿದ ಚಾಲಕನ ವಿರುದ್ಧ ತುಮಕೂರು ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಸೊಗಡು ಶಿವಣ್ಣ.


ಸಂಬಂಧಿತ ಟ್ಯಾಗ್ಗಳು

sogadu shivanna Bus driver ಪ್ರಾಣಾಪಾಯ ಅತಿವೇಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ