ಹೋಟೆಲ್ ಬಂದ್ ! ಜಿ.ಎಸ್.ಟಿ.ಗೆ. ನಮ್ಮ ವಿರೋಧವಿಲ್ಲ !

Kannada News

30-05-2017

ಬೆಂಗಳೂರು:- ದೇಶಾದ್ಯಂತ ಇಂದು ಹೋಟೆಲ್ ಹಾಗೂ ಔಷಧಿ ಅಂಗಡಿಗಳು ಬಂದ್ ಆಗಿದ್ದು. ಬೆಂಗಳೂರಿನ ಬಹತೇಕ ಹೋಟಲ್‌ಗಳು ಬಾಗಿಲು ಮುಚ್ಚಿವೆ. ಜಿ.ಎಸ್.ಟಿ.ಯನ್ನು ಶೇಕಡ 5 ರಷ್ಟು ನಿಗದಿ ಮಾಡುವಂತೆ ಆಗ್ರಹಿಸಿ ಹೋಟೆಲ್‌ಗಳು ಬಂದ್ ನಡೆಸುತ್ತಿದ್ದಾರೆ. ಹಾಗಾಗಿ ಊಟ, ತಿಂಡಿಗಳಿ ಜನರು ಪರದಾಡುವಂತಾಗಿದೆ. ಹೋಟೆಲ್ ಬಂದ್‌ಗೆ, ಬೇಕರಿ, ಸಿಹಿ ತಿಂಡಿ ಮಾರಾಟಗಾರರು ಬೆಂಬಲ ನೀಡಿದ್ದಾರೆ. ಇದರಿಂದ ಜನರಿಗೆ ಇಡೀ ದಿನ ತಿನ್ನಲಿಕ್ಕೂ ಹೊರಗಡೆ ತಿಂಡಿ, ಊಟ ಸಿಗುವುದು ಕಷ್ಟವಾಗಲಿದೆ. ಈ ಸಂಬಂಧ ಮಾತನಾಡಿದ ಬೆಂಗಳೂರು ಹೋಟೆಲ್ ಮಾಲೀಕರು, ಜಿ.ಎಸ್.ಟಿ.ಗೆ. ನಮ್ಮ ವಿರೋಧವಿಲ್ಲ. ಆದರೆ 50 ಲಕ್ಷ ವಹಿವಾಟಿನ ನಾನ್ ಎ.ಸಿ. ಹೋಟೆಲ್‌ಗೆ ಶೇಕಡ 12 ರಷ್ಟು ಹಾಗೂ ಎ.ಸಿ. ಹೋಟೆಲ್‌ಗಳಿಗೆ ಶೇಕಡ 18 ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಇದೆ. ಇದನ್ನು ಶೇಕಡ 5ಕ್ಕೂ ನಿಗದಿ ಮಾಡಿ ಎಂಬುದು ನಮ್ಮ ಬೇಡಿಕೆ. ಪ್ರಸ್ತುತ ಹೋಟೆಲ್‌ಗೆ ಶೇಕಡ 4 ರಷ್ಟು ತೆರಿಗೆ ಇದ್ದು ಇದನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿಲ್ಲ. ಜಿ.ಎಸ್.ಟಿ. ಶೇಕಡ 12 ರಷ್ಟು ನಿಗದಿಯಾದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ. ಹೋಟೆಲ್ ವ್ಯಾಪಾರ ಕುಸಿತ ವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಹೋಟೆಲ್‌ಗೆ ಶೇಕಡ 5 ರಷ್ಟು ಜಿ.ಎಸ್.ಟಿ. ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ. ಇತ್ತ ದೇಶಾದ್ಯಂತ ಔಷಧಿ ಅಂಗಡಿಗಳು ಬಂದ್ ಆಗಿದ್ದು, ಬೆಂಗಳೂರಿನಲ್ಲಿರುವ 8 500 ಮೆಡಿಕಾಲ್ ಶಾಪ್ ಗಳು ಮುಚ್ಚಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ