‘ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಅಸಂಬದ್ಧ’26-07-2018

ಹಾವೇರಿ: ಉತ್ತರ ಕರ್ನಾಟಕ ಪ್ರತ್ಯೇಕತೆಗೆ ಎದ್ದಿರುವ ಕೂಗಿಗೆ ವಿಧಾನ ಪರಿಷತ್ ನ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಗರಂ ಆಗಿದ್ದಾರೆ. 'ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಅಸಂಬದ್ಧ’ ಎಂದು ಹೇಳಿದ್ದಾರೆ. ಈ ಕುರಿತು ಹಾವೇರಿಯಲ್ಲಿ ಮಾತನಾಡಿದ ಹೊರಟ್ಟಿ, ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರ ಜೊತೆ ಸಭೆ ನಡೆಸಿ ಅಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸುತ್ತೇವೆ. ಸಿಎಂ ಕುಮಾರಸ್ವಾಮಿಯವರ ನೇತೃತ್ವದಲ್ಲೇ ಸಭೆ ಮಾಡಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಸಮಸ್ಯೆಗಳ ಕುರಿತು ಚರ್ಚಿಸಿ ಬಗೆಹರಿಸುವ ನಿಟ್ಟಿನಲ್ಲಿ ಕೆಲಸಮಾಡಬೇಕು, ಇದು ನಮ್ಮೇಲ್ಲರಿಂದಲೂ ಸಾಧ್ಯ. ಇದಕ್ಕೆ ಪ್ರತ್ಯೇಕ ರಾಜ್ಯ ಬೇಕಾಗಿಲ್ಲ ಎಂದು ಪ್ರತ್ಯೇಕತೆ ಬಗ್ಗೆ ಕಿಡಿಕಾರಿದ್ದಾರೆ.

ಮಾಜಿ ಸ್ಪೀಕರ್ ಕೋಳಿವಾಡ ಪೀಠೋಪಕರಣ ಮನೆಗೆ ಕೊಂಡೊಯ್ದ ವಿಚಾರದ ಕುರಿತು ಮಾತನಾಡಿ, ಪೀಠೋಪಕರಣಳನ್ನು ಮನೆಗೆ ಕೊಂಡೊಯ್ದಿದ್ದು ತಪ್ಪು, ಗೃಹ ಉಪಯೋಗದ ವಸ್ತುಗಳನ್ನು ಸರ್ಕಾರ ಕೊಡುತ್ತದೆ. ನಿಗದಿ ಪಡಿಸಿದ ಹಣ ಪಾವತಿಸಿ ಮನೆಗೆ ಒಯ್ದರೆ ತಪ್ಪಿಲ್ಲ. ಆದರೆ ಕೋಳಿವಾಡರು ಪೀಠೋಪಕರಣ ಮನೆಗೆ ಒಯ್ದದ್ದು ತಪ್ಪು ಎಂದು ಅಭಿಪ್ರಾಯಪಟ್ಟರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ