ಬಿಜೆಪಿಯವರ ಪಾದಯಾತ್ರೆ ಸ್ವಾಗತಿಸುತ್ತೇನೆ: ಸಿಎಂ

CM kumaraswamy reaction on bjp padayatra

26-07-2018

ಬೆಂಗಳೂರು: ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಪಾಲ್ಗೊಂಡ ಸಿಎಂ ಕುಮಾರಸ್ವಾಮಿ ಅವರು, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ನಂತರದಲ್ಲಿ ಮಾತನಾಡಿದ ಸಿಎಂ  ಕಾರ್ಗಿಲ್ ಯುದ್ಧದಲ್ಲಿ ವೀರ ಯೋಧರಿಗೆ ಗೌರವ ಸಲ್ಲಿಸಲು ಬಂದಿದ್ದೇನೆ ಎಂದರು.

ಇನ್ನು ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ವಿಚಾರವಾಗಿ ಮಾತನಾಡಿ ‘ಬಿಜೆಪಿಯವರ ಪಾದಯಾತ್ರೆಯನ್ನು ನಾನು ಸ್ವಾಗತಿಸುತ್ತೇನೆ,  ಹೋರಾಟ, ಪ್ರತಿಭಟನೆ ಮಾಡೋದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ. ಈಗಲಾದರೂ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಪಾದಯಾತ್ರೆಯಿಂದ ಕೆಲವರಿಗೆ ವೈಯಕ್ತಿಕವಾಗಿ, ರಾಜಕೀಯ ಲಾಭವಾಗಬಹುದು, ಕೇಂದ್ರ ಸರ್ಕಾರವೇ 4 ವರ್ಷದಿಂದ ಸಾಲಮನ್ನಾ ಮಾಡಲಿಲ್ಲ ಏಕೆ' ಎಂದು ಪ್ರಶ್ನಿಸಿದ್ದಾರೆ.

ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ ಗೆ ಕರೆ ನೀಡಿರೋರು ಯಾರು...? ಆ ಸಂಘಟನೆ ಅವರಿಗೆ ಕೇಳುತ್ತೇನೆ, ಅಭಿವೃದ್ಧಿ ಎಷ್ಟಾಗಿದೆ ಅನ್ನೋದನ್ನ ಚರ್ಚೆ ಮಾಡಲಿ, ಸಾರ್ವಜನಿಕವಾಗಿ ಚರ್ಚೆಗೆ ಸಿದ್ಧರಿದ್ದೇವೆ, ಆ ಸಂಘಟನೆ ಅವರನ್ನು ಕರೆಯುತ್ತೇವೆ, ಚರ್ಚೆ ಅವರೇ ಮಾಡಲಿ ಎಂದಿದ್ದಾರೆ ಸಿಎಂ ಕುಮಾರ ಸ್ವಾಮಿ.

ರೈತರ ಸಾಲಮನ್ನಾ ವಿಚಾರ ಪದೇ ಪದೇ ಚರ್ಚೆ ಮಾಡೋದು ಬೇಡ. ದೇಶದಲ್ಲೇ ಮೊದಲ ಬಾರಿಗೆ ದೊಡ್ಡ ಮೊತ್ತದ ರೈತರ ಸಾಲ ಮನ್ನಾ ಮಾಡಿದ್ದೇನೆ. ನನಗೆ ಬೆಂಬಲ ಸೂಚಿಸೋದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೋ ಇಲ್ಲ ವಿರೋಧ ಮಾಡುತ್ತಿದ್ದಾರೋ ಹೇಳಬೇಕು ಎಂದು ಲೇವಡಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.Kumaraswamy Kargil ಪ್ರತ್ಯೇಕ ರಾಜ್ಯ ಸಂಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ