ಕಾರ್ಗಿಲ್ ಹುತಾತ್ಮರಿಗೆ ಡಿಸಿಎಂ ಅವರಿಂದ ಗೌರವ ಸಲ್ಲಿಕೆ

DCM parameshwar honored Kargil martyrs

26-07-2018

ಬೆಂಗಳೂರು: ಇಂದು 19ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಹಿನ್ನೆಲೆ ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಪುಷ್ಟವನ್ನು ಅರ್ಪಿಸುವುದರ ಮೂಲಕ ಡಿಜಿಪಿ ನೀಲಮಣಿ ‌ರಾಜು ಅವರು ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ. ಇವರರೊಂದಿಗೆ ಹಿರಿಯ ಅಧಿಕಾರಿಗಳೂ ಸಹ ಗೌವರ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಆಗಮಿಸಿದ್ದರು. ಉಪ ಮುಖ್ಯಮಂತ್ರಿಗಳು ಸೈನಿಕ ಸ್ಮಾರಕಕ್ಕೆ ಹೂ ಗುಚ್ಛ ಇಟ್ಟು ಗೌರವ ಸಲ್ಲಿಸಿದ್ದಾರೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರೂ ಗೌರವ ಸಲ್ಲಿಸಿದ್ದಾರೆ.

ನಂತರದಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ರೈತರ ಸಂಪೂರ್ಣ ಸಾಲಮನ್ನಾಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆ ವಿಚಾರದ ಕುರಿತು, ಬಿಜೆಪಿಯವರಿಗೆ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ವಿಚಾರ ಇಲ್ಲ. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ಸಾಲಮನ್ನಾ ಮಾಡಿದೆ. ಸಾಲಮನ್ನಾದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಬಿಜೆಪಿಯವರಿಗಿಲ್ಲ ಎಂದರು.

ಬಿಜೆಪಿಯವರು ಇಲ್ಲಿ ಪಾದಯಾತ್ರೆ ಮಾಡುವ ಬದಲು ಪ್ರಧಾನಿ ಬಳಿ ಹೋಗಿ ರೈತರ ಸಾಲಮನ್ನಾ ಮಾಡಿಸಲು ಒತ್ತಾಯಿಸಲಿ. ಸಾಲಮನ್ನಾ ಮಾಡಿಸಲಿ, ಆಗ ಅವರನ್ನು ಮೆಚ್ಚುತ್ತೇವೆ. ಕೇಂದ್ರ ಸರ್ಕಾರ ಸಾಲಮನ್ನಾ ಮಾಡಿಸಿ ಅದರ ಕ್ರೆಡಿಟ್ ಬಿಜೆಯವರೇ ಪಡೆಯಲಿ. ಇಲ್ಲಿ ರಾಜಕೀಯ ಮಾಡುವ ಬದಲು ಬಿಜೆಪಿಯವರು ಕೇಂದ್ರ ಸರ್ಕಾರದ ಬಳಿ ಹೋಗಲಿ ಎಂದು ಬಿಜೆಪಿ ಪಾದಯಾತ್ರೆಗೆ ತಿರುಗೇಟು ನೀಡಿದ್ದಾರೆ.

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ