ಕೆರೆಯ ಹೂಳಿನಲ್ಲಿ ಸಿಕ್ಕಿ ವಿದ್ಯಾರ್ಥಿ ಸಾವು !

Kannada News

30-05-2017

ತುಮಕೂರು:- ಈಜಲು ಕೆರೆಗೆ ಹೋದ ವಿಧ್ಯಾರ್ಥಿ ನೀರುಪಾಲಾದ ಘಟನೆ ತೋವಿನಕೆರೆ ಸೊರೇನಹಳ್ಳಿ ಕೆರೆಯಲ್ಲಿ ನಡೆದಿದೆ. 5 ಜನ ವಿದ್ಯಾರ್ಥಿಗಳು ಈಜಲು ಹೋದ ವೇಳೆ ದುಘ೯ಟನೆ ಸಂಭವಿಸಿದೆ. 6ನೇ ತರಗತಿಯ ತೇಜು ನೀರು ಪಾಲಾದ ದುರ್ದೈವಿ, ತೇಜು ತಾಲ್ಲೂಕಿನ ತೋವಿನಕೆರೆ ಗ್ರಾಮದ ವಿರೇಶ್ ಎಂಬುವರ ಮಗನಾಗಿದ್ದಾನೆ, ಕೊರಟಗೆರೆ ಸಿಪಿಐ ಸ್ಥಳಕ್ಕೆ ಬೇಟಿನೀಡಿ  ಹೆಚ್ಚಿನ ತನಿಖೆ ನಡೆಸುತ್ತಿದ್ದು,  ಕೆರೆಯ ನೀರಿನಲ್ಲಿ ಇದ್ದ ಹೂಳಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ, ಮತ್ತು ಪೂಲೀಸರು ಶೋದ ಕಾರ್ಯದಲ್ಲಿ ತೊಡಗಿದ್ದಾರೆ. 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ