ಜಮೀನು ವಿವಾದ: ವ್ಯಕ್ತಿ ತಲೆ ಕತ್ತರಿಸಿ ಭೀಕರ ಕೊಲೆ

Land dispute: A man

25-07-2018

ಬೆಂಗಳೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‍ ಒಬ್ಬರನ್ನು ಸಂಬಂಧಿಕನೇ ಮಚ್ಚಿನಿಂದ ತಲೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸೂರ್ಯಸಿಟಿಯ ಅಡಿಗಾರ್ ಕಲ್ಲಹಳ್ಳಿಯ ನಾಗರಾಜ (32) ಕೊಲೆಯಾದವರು. ನಾಗರಾಜ ಅವರನ್ನು ಆತನ ಸಂಬಂಧಿ ಮಂಜು ಎಂಬಾತ ತಲೆ ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ನಾಗರಾಜು ಹಾಗೂ ಮಂಜು ನಡುವೆ ಜಮೀನು ಖರೀದಿ ಮಾರಾಟದ ವಿಷಯವಾಗಿ ವೈಷಮ್ಯ ಬೆಳೆದು ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳದಿಂದ ಆಕ್ರೋಶಗೊಂಡಿದ್ದ ಮಂಜು, ರಾತ್ರಿ 9.45ರ ವೇಳೆ ಅಡಿಗಾರ್ ಕಲ್ಲಹಳ್ಳಿಯ ಮನೆಯಲ್ಲಿ ಊಟ ಮಾಡಿ ಕುಳಿತಿದ್ದ ನಾಗರಾಜ್‍ನನ್ನು ಕರೆಸಿಕೊಂಡು ಮಚ್ಚಿನಿಂದ ಕತ್ತು ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಸೂರ್ಯಸಿಟಿ ಪೊಲೀಸರು ಪರಿಶೀಲನೆ ನಡೆಸಿ ಕೃತ್ಯವೆಸಗಿ ಪರಾರಿಯಾಗಿರುವ ಮಂಜುಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಗ್ರಾಮಾಂತರ ಎಸ್‍ಪಿ ಶಿವಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder land ಜಮೀನು ವಿವಾದ ರಿಯಲ್ ಎಸ್ಟೇಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ