ಮೂಢನಂಬಿಕೆ: ನದಿಗೆ ಹಾರಿ ಸಾಯಲೆತ್ನಿಸಿದ ದಂಪತಿ

husband and wife attempted to suicide in kapila river!

25-07-2018

ಬೆಂಗಳೂರು: ಮೋಕ್ಷ ಸಿಗುತ್ತದೆ ಎನ್ನುವ ಮೂಢನಂಬಿಕೆಯಿಂದ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ನಗರದ ದಂಪತಿಯಲ್ಲಿ ಪತಿ ಮೃತಪಟ್ಟರೆ ಪತ್ನಿ ಬದುಕುಳಿದಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಹೆಬ್ಬಾಳದ ನಾಗರಾಜು ಮತ್ತು ಕಲಾವತಿ ಎಂಬ ದಂಪತಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಪತಿ ನಾಗರಾಜು ಸಾವನ್ನಪ್ಪಿದ್ದರೆ. ಪತ್ನಿ ಕಲಾವತಿ ಬದುಕುಳಿದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂತಹ ಪವಿತ್ರ ಸ್ಥಳಕ್ಕೆ ಆಗಮಿಸುವ ಕೆಲವು ಭಕ್ತರು ಕಪಿಲಾ ನದಿಯಲ್ಲಿ ಜೀವ ಬಿಟ್ಟರೆ ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಹೀಗೆ ಜೀವ ಕಳೆದು ಕೊಳ್ಳುತ್ತಿದ್ದಾರೆ. ಈಗ ಈ ಸಾಲಿಗೆ ಬೆಂಗಳೂರು ಮೂಲದ ಹೆಬ್ಬಾಳ ನಿವಾಸಿಗಳಾದ ನಾಗರಾಜು ಮತ್ತು ಕಲಾವತಿ ವೃದ್ಧ ದಂಪತಿಯೂ ಸೇರ್ಪಡೆ ಆಗಿದ್ದಾರೆ.

ಕಾಲು ಜಾರಿ ನದಿಗೆ ಬಿದ್ದಿದ್ದೇವೆ ಎಂದು ಪ್ರಾಣಾಪಾಯದಿಂದ ಪಾರಾದ ಕಲಾವತಿ ಹೇಳಿದ್ದಾರೆ. ನಂಜನಗೂಡು ನಂಜುಂಡೇಶ್ವರನ ದರ್ಶನಕ್ಕಾಗಿ ಬೆಂಗಳೂರಿನಿಂದ ಬಂದಿದ್ದೆವು. ದೇವರ ದರ್ಶನ ಮುಗಿಸಿ ನದಿ ಹತ್ತಿರ ಬಂದೆವು. ಪತಿಯನ್ನು ಹಿಡಿದುಕೊಳ್ಳಲು ಹೋದಾಗ ನಾನೂ ನೀರಿಗೆ ಬಿದ್ದೆ ಎಂದು ಪೊಲೀಸರ ಮುಂದೆ ಕಲಾವತಿ ಹೇಳಿಕೆ ನೀಡಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಜಾಸ್ತಿಯಾಗಿ ತಿಂಗಳಿಗೆ ಕೋಟಿ ಹಣವನ್ನು ಗಳಿಸುತ್ತಿದೆ. ಈ ಮೂಲಕ ರಾಜ್ಯದ ಅತ್ಯಂತ ಶ್ರೀಮಂತರ ದೇವಾಲಯಗಳಲ್ಲಿ ನಂಜನಗೂಡಿನ ನಂಜುಂಡನ ಸನ್ನಿಧಿ ಸಹ ಒಂದಾಗಿದೆ.


ಸಂಬಂಧಿತ ಟ್ಯಾಗ್ಗಳು

Nanjangud Kabini River ಮೂಢನಂಬಿಕೆ ಮೋಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ