ಮುಗಿದಿಲ್ಲ ಲಾರಿ ಮುಷ್ಕರ: ಸಂಕಷ್ಟದಲ್ಲಿ ಕೂಲಿ ಕಾರ್ಮಿಕರು

5th day of Lorry strike huge losses... lorry cleaners and other workers under pressure

25-07-2018

ಬೆಂಗಳೂರು: ರಸ್ತೆ ಟೋಲ್ ಮುಕ್ತ ಮಾಡುವುದು ಡೀಸೆಲ್ ಬೆಲೆ ಇಳಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಲಾರಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು ಸರಕು ಸಾಗಾಣೆಯಲ್ಲಿ ಭಾರೀ ವ್ಯತ್ಯಯ ಕಂಡು ಬಂದಿದೆ. ಮುಷ್ಕರದಿಂದ ಕೋಟ್ಯಾಂತರ ನಷ್ಟ ಸಂಭವಿಸುತ್ತಿದ್ದು ಕೂಲಿ ಕಾರ್ಮಿಕರು ಲಾರಿ ಚಾಲಕರು, ಕ್ಲಿನರ್ ಗಳು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು ಯಾವಾಗ ಮುಷ್ಕರ ಅಂತ್ಯಗೊಳ್ಳಲಿದೆಯೋ ಎಂದು ಕಾದು ಕುಳಿತಿದ್ದಾರೆ.

ದೊಡ್ಡ ಪ್ರಮಾಣದ ಲಾರಿಗಳು ಸರಕು ಸಾಗಾಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು ಸರಕು ಸಾಗಣೆಯಾಗುವುದು ಸಂಪೂರ್ಣ ನಿಂತು ಹೋಗಿದೆ. ಇದರಿಂದ ಪೂರೈಕೆ ಮೇಲೆ ಪರಿಣಾಮ ಬೀರಿದೆ. ದೇಶಾದ್ಯಂತ ನಡೆಯುತ್ತಿರುವ ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅದರ ಪ್ರಭಾವ ದಿನದಿಂದ ದಿನಕ್ಕೆ ತೀವ್ರಗೊಂಡಿದೆ.

ಲಾರಿ ಮಾಲೀಕರ ಸಂಘಟನೆಗಳು ಕೇಂದ್ರ ಸರ್ಕಾರರ ಮುಂದೆ ಇಟ್ಟಿರುವ ವಿವಿಧ ಬೇಡಿಕೆಗಳಾದ ಟೋಲ್ ಮುಕ್ತ ಮಾಡುವುದು, ಡೀಸೆಲ್ ಬೆಲೆ ಹಾಗು ದುಭಾರಿ ವಿಮಾ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ಜಿ.ಆರ್.ಷಣ್ಮುಗಪ್ಪ ನೇತೃತ್ವದ ಲಾರಿ ಮಾಲಿಕರು ಮತ್ತು ಸರಕು ಸಾಗಾಣೆಯ ಮಾಲೀಕರ ಸಂಘ ಬಿಗಿ ಪಟ್ಟು ಹಿಡಿದಿದೆ. ದೇಶಾದ್ಯಂತ ಲಾರಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದರೂ ಕೇಂದ್ರ ಸರ್ಕಾರ ಲಾರಿ ಮಾಲೀಕರ ಸಂಘದ ಮುಖಂಡರೊಂದಿಗೆ ಮಾತುಕತೆ ಮಾಡುವ ಗೋಜಿಗೆ ಹೋಗದಿರುವುದರಿಂದ ಮುಷ್ಕರವನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯಲು ಮಾಲೀಕರು ಮುಂದಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

lorry strike demands ಟೋಲ್ ಡೀಸೆಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ