ಅಪಘಾತ: ಕಟೀಲು ದೇವಾಲಯದ ಅರ್ಚಕನ ಪುತ್ರ ಸಾವು

Accident: The son of the priest of Kateel temple died

25-07-2018

ಬೆಂಗಳೂರು: ನಗರದ ಹೊರವಲಯದ ಟಿ.ಬೇಗೂರು ಬಳಿ ನಿನ್ನೆ ರಾತ್ರಿ ವೇಗವಾಗಿ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಹಠಾತ್ ಬ್ರೇಕ್ ಹಾಕಿದ್ದರಿಂದ ಹಿಂದಿನ ಕಾರು ಅದಕ್ಕೆ ಅದರ ಹಿಂದಿನ ಕ್ಯಾಂಟರ್ ಗೆ ಅಪ್ಪಳಿಸಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಟೀಲು ದೇವಾಲಯದ ಅರ್ಚಕನ ಪುತ್ರ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕಟೀಲು ದೇವಳದ ಅರ್ಚಕ ಹರಿನಾರಾಯಣ ಅಸ್ರಣ್ಣರ ಪುತ್ರ ಶ್ರೀನಿಧಿ (21) ಕಟೀಲುವಿನ ಪ್ರಜ್ವಲ್ (20)ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೂಡಬಿದಿರೆಯ ಶರತ್ ಭಂಡಾರಿ ಮತ್ತು ಕಟೀಲಿನ ಶರತ್ ರಾಮ್ ದಾಸ್‍ ಎಂಬುವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.

ಅಪಘಾತ ನಡೆದ್ದು ಹೇಗೆ?

ಕೆಂಗೇರಿಯ ಆರ್‍ಎನ್‍ಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ನಾಲ್ವರು ತುಮಕೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಟಿ.ಬೇಗೂರಿನ ತಾಳೆಕೆರೆ ಕ್ರಾಸ್ ಬಳಿ ನಗರಕ್ಕೆ ಬರುತ್ತಿದ್ದ ನರಗುಂದ ಡಿಪೋದ ಕೆಎಸ್‍ಆರ್‍ಟಿಸಿ ಬಸ್ ಮುಂದೆ ಹೋಗುತ್ತಿತ್ತು.

ಅದರ ಹಿಂದೆ ಕಾರು, ಕಾರಿನ ಹಿಂದೆ ಕ್ಯಾಂಟರ್ ವಾಹನ ಬರುತ್ತಿದ್ದವು. ಬಸ್ ಚಾಲಕ ಒಮ್ಮೆಲೇ ಬ್ರೇಕ್‍ ಹಾಕಿದ್ದರಿಂದ ಹಿಂಬದಿಯಲ್ಲಿದ್ದ ಕಾರು, ಕ್ಯಾಂಟರ್ ರಭಸದಿಂದ ಒಂದಕ್ಕೊಂದು ಗುದ್ದಿಕೊಂಡು ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ಒಳಗೆ  ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪರದಾಡಬೇಕಾಯಿತು. ಮೃತದೇಹಗಳನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident post mortem ಕಟೀಲು ದೇವಾಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ