ಸಕಲೇಶಪುರದಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ

wild elephant attack on man at sakleshpur

25-07-2018

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಳಕೆರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ನಿನ್ನೆಯಷ್ಟೆ ವ್ಯಕ್ತಿಯೊರ್ವನ ಮೇಲೆ ಆನೆ ದಾಳಿ ಮಾಡಿದ್ದು ಈತನಿಗೆ ಗಂಭೀರ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಮಠಸಾಗರ ಗ್ರಾಮದಲ್ಲಿನ ಕಾಫಿತೋಟದಲ್ಲಿ ಆನೆಗಳು ಬೀಡುಬಿಟ್ಟಿದ್ದು ಆತಂಕ‌ ಸೃಷ್ಟಿಸಿವೆ. ಅದಲ್ಲದೆ ಕಾಫಿತೋಟದಲ್ಲಿ ಕೆಲಸಮಾಡುತ್ತಿದ್ದ ತೋಟದ ಮಾಲೀಕ ಎಂ.ಡಿ.ಯೋಗೇಶ್ ಮೇಲೆಯೂ ದಾಳಿ ಮಾಡಿವೆ. ಕಾಫಿ ತೋಟದಲ್ಲೇ ಆನೆಗಳು ಬೀಡುಬಿಟ್ಟಿರುವುದರಿಂದ ಗ್ರಾಮದ ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Elephants sakleshpur ಹಾವಳಿ ಕಾಡಾನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ