ಕೇಂದ್ರ ಸರ್ಕಾರದ ಈ ನಿರ್ಧಾರ ಅಸಂವಿಧಾನಿಕ !

Kannada News

29-05-2017

ಪಶ್ಚಿಮ ಬಂಗಾಳ:- ಗೋ ಹತ್ಯೆ ನಿಷೇಧದ ಕುರಿತು ಪಶ್ಚಿಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ನಾನು ಕೇಂದ್ರ ಸರ್ಕಾರದ ಆದೇಶವನ್ನು ವಿರೋಧಿಸುತ್ತೇನೆ. ಕೇಂದ್ರದ ಈ ನಿರ್ಧಾರ ಅಸಂವಿಧಾನಿಕ ಎಂದಿದ್ದಾರೆ. ಜಾತ್ಯಾತೀತ ಪಕ್ಷಗಳು ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕು ಎಂದು ಸುದ್ದಿಗೊಷ್ಟಿಯೊಂದರಲ್ಲಿ ತಿಳಿಸಿದ್ದಾರೆ. ಈ ಸರ್ಕಾರವು ಹಸುವಿನ ಹಾಲನ್ನು ಸಹ ನಿಷೇದಿಸುತ್ತದೆ ಎಂದ ಅವರು ಗೋಮಾತೆ ಎಲ್ಲರಿಗೂ ಗೋ ಮಾತೆ ಅಲ್ಲದೆ ಸಮಸ್ಯೆಯನ್ನು ಪರಿಷ್ಕರಿಸುವ ವಿಧಾನ ಇದಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇದನ್ನೇ ನಂಬಿ ಕೊಂಡಿರುವ ಹಲವು ಕುಟುಂಬಗಳ ಸ್ಥಿತಿ ಚಿಂತಾಜನಕವಾಗಲಿದೆ ಎಂದರು.       ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ