ಏಕಕಾಲದಲ್ಲಿ 7ಕಡೆ ಎಸಿಬಿ ದಾಳಿ

ACB Raid on 7 different places at bengaluru

24-07-2018

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ಕರ್ನಾಟಕ ಉದ್ಯೋಗ ಮಿತ್ರದ ಜಂಟಿ ನಿರ್ದೇಶಕರ ರೇವಣ್ಣ ಗೌಡ ಸೇರಿದಂತೆ ಇಬ್ಬರು ಅಧಿಕಾರಿಗಳ ಕಚೇರಿ ಮನೆ ಸೇರಿ 7 ಕಡೆಗಳಲ್ಲಿ ಏಕಕಾಲದ ದಾಳಿ ನಡೆಸಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆಹಚ್ಚಿದ್ದಾರೆ.

ರೇವಣ್ಣ ಗೌಡ ಹೆಚ್.ಎಂ ಅವರ ಖನಿಜ ಭವನದ ಕಚೇರಿ ಬಸವೇಶ್ವರನಗರ ವಾಸದ ಮನೆ ಸೇರಿ 2 ಮನೆ ಕಲಬುರಗಿಯ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ದೇವಿಂದ್ರ  ವಾಸದ ಮನೆ ಸೇರಿ ಒಟ್ಟು 3 ಮನೆ ಮತ್ತು ಕಛೇರಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ದಾಖಲೆ ಪತ್ರಗಳು ಆಸ್ತಿ-ಪಾಸ್ತಿಗಳ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ACB Raid ಆಸ್ತಿ-ಪಾಸ್ತಿ ನಿರ್ದೇಶಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ