ಕಾಣೆಯಾಗಿದ್ದ 9 ಮಂದಿ ಬಾಲಾಪರಾಧಿಗಳ ಪತ್ತೆ

9 missing juveniles found at bengaluru

24-07-2018

ಬೆಂಗಳೂರು: ಮಡಿವಾಳದ ಬಾಲಾಪರಾಧಿ ಮಂದಿರದಿಂದ ನಾಪತ್ತೆಯಾಗಿದ್ದ 9 ಬಾಲಕರನ್ನು  ಪತ್ತೆಮಾಡುವಲ್ಲಿ ಮಡಿವಾಳ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಪರಾಧಿ ಮಂದಿರದಲ್ಲಿ ಸೋಮವಾರ ಬೆಳಿಗ್ಗೆ ತಿಂಡಿ ತಿಂದ ಬಳಿಕ ಬಾಲಾಪರಾಧಿ ಮಂದಿರದ ಕಾಂಪೌಂಡ್ ಬಳಿ ಮಕ್ಕಳು ಓಡಾಡುತ್ತಿದ್ದ ಬಾಲಕರು ಕೆಲ ಸಮಯದ ನಂತರ ಪರಾರಿಯಾಗಿದ್ದರು.

ಘಟನೆ ನಡೆದ ತಕ್ಷಣ ಮಂದಿರದ ಸಿಬ್ಬಂದಿ ಮಡಿವಾಳ ಪೊಲೀಸರಿಗೆ ಮೌಖಿಕ ದೂರು ನೀಡಿ, ಕಾಣೆಯಾಗಿರುವ ಮಕ್ಕಳ ಬಗ್ಗೆ ವಿವರ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು ತೀವ್ರ ಶೋಧ ನಡೆಸಿ ಬಾಲಕರನ್ನು ಪತ್ತೆಹಚ್ಚಿದ್ದಾರೆ. ಮಕ್ಕಳು ಮನೆಗೆ ಬಂದರೆ ಮಾಹಿತಿ ನೀಡಲು ಕುಟುಂಬಸ್ಥರಿಗೂ ಮನವಿ ಮಾಡಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಾಪರಾಧಿ ಕಾಯ್ದೆಯಡಿ ಮಕ್ಕಳ ಹೆಸರು ಮತ್ತು ಚಹರೆ ಬಹಿರಂಗಪಡಿಸುವಂತಿಲ್ಲ.

 


ಸಂಬಂಧಿತ ಟ್ಯಾಗ್ಗಳು

Missed juvenile ಬಾಲಾಪರಾಧಿ ಕಾಯ್ದೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ