ಎರಡೇ ತಿಂಗಳಲ್ಲಿ ಪ್ರೀತಿ-ಮದುವೆ..ನಂತರ ಪತಿಗೆ ಬರೀ ಮೋಸ

love in month..marriage in second month.. cheating to his husband in third month

24-07-2018

ಬೆಂಗಳೂರು: ಒಂದೆ ಕಂಪನಿಯಲ್ಲಿ ಕೆಸಮಾಡುತ್ತಿದ್ದ ಇಬ್ಬರ ಮಧ್ಯೆ ಇದ್ದ ಪರಿಚಯ ಒಂದೇ ತಿಂಗಳಲ್ಲಿ ಪ್ರೀತಿ, ಎರಡನೇ ತಿಂಗಳಿಗೆ ಮದುವೆ, ಮೂರನೇ ತಿಂಗಳಲ್ಲಿ ಪತಿ ಹಣದ ಸಮೇತ ಪತ್ನಿ ಪರಾರಿಯಾಗಿರುವ ಸಿನಿಮೀಯ ಘಟನೆ ಬಾಣಸವಾಡಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನಾಪತ್ತೆಯಾಗಿರುವ ಪತ್ನಿಯನ್ನು ಹಂಬಲಿಸುತ್ತಾ ಪತಿ ಕಣ್ಣೀರಿಡುತ್ತಿದ್ದು ಆಕೆಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿರುವ ಆಂಧ್ರ ಮೂಲದ ಇಲಿಯಾಸ್ ಅಹಮ್ಮದ್ ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಂದು ಎಂಬ ಯುವತಿಯೊಂದಿಗೆ ಪರಿಚಯವಾಗಿತ್ತು.

ಪರಿಚಯವಾಗಿ ಒಂದೇ ತಿಂಗಳಲ್ಲಿ ಪ್ರೇಮಕ್ಕೆ ತಿರುಗಿ ಎರಡನೇ ತಿಂಗಳಲ್ಲಿ ಇಬ್ಬರ ಮದುವೆಯೂ ನಡೆದಿದೆ. ಮೇ 30ರಂದು ಸ್ನೇಹಿತರೊಬ್ಬರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿದ ಪತ್ನಿ ಇದೂವರೆಗೂ ಹಿಂದಿರುಗಿ ಬಂದಿಲ್ಲ. ಮನೆಯಿಂದ ಹೋಗುವಾಗ ಇಲಿಯಾಸ್ ನ 4ಲಕ್ಷ ರೂ. ಹಣ ಮತ್ತು 50ಗ್ರಾಂ ಚಿನ್ನದ ಒಡೆವೆ ಸಮೇತ ಪರಾರಿಯಾಗಿದ್ದಾಳೆ.

ವಿಷಯ ತಿಳಿದ ಗಂಡ ಇಲಿಯಾಸ್ ಪತ್ನಿಗಾಗಿ ಸಿಕ್ಕ ಸಿಕ್ಕ ಕಡೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹುಡುಕಾಟದಲ್ಲಿ ತನ್ನ ಪತ್ನಿಯ ಬಗ್ಗೆ ಮತ್ತಷ್ಟು ಆಸಲಿ ಸತ್ಯಗಳು ಬೆಳಕಿಗೆ ಬಂದಿವೆ. ಪತ್ನಿ ಬಿಂದುಗೆ ಇಲಿಯಾಸ್ ಜೊತೆ ವಿವಾಹಕ್ಕೂ ಮುನ್ನವೇ ಮತ್ತೊಂದು ಮದುವೆ ಆಗಿರುವುದು ಗೊತ್ತಾಗಿದೆ.

ಇದಲ್ಲದೇ ಬಿಂದು ಈಗ ಮತ್ತೊಂದು ಯುವಕನ ಜೊತೆ ಮದುವೆ ತಯಾರಿ ನಡೆಸಿದ್ದಾಳೆ, ಎಂಬ ಮಾಹಿತಿಗಳು ಸಹ ಇಲಿಯಾಸ್ ಸಿಕ್ಕಿದೆ. ಇಷ್ಟೆಲ್ಲಾ ಆದರೂ ನನಗೆ ನನ್ನ ಹೆಂಡತಿ ಬೇಕು ಎಂದು ಇಲಿಯಾಜ್ ಕಣ್ಣೀರು ಹಾಕುತ್ತಿದ್ದಾರೆ. ಈ ಸಂಬಂಧ ಇಲಿಯಾಸ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

cheating Love-marriage ಪೊಲೀಸರು ಹುಡುಕಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ