ಕರ್ತವ್ಯಲೋಪ: ಸಹಾಯಕ ಎಂಜಿನಿಯರ್ ಅಮಾನತು

panchayat raj assistant engineer suspended at badami

24-07-2018

ಬಾಗಲಕೋಟೆ: ಕರ್ತವ್ಯಲೋಪ ಹಿನ್ನೆಲೆ ಬಾದಾಮಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕುಡಿಯುವ ನೀರು ವಿಭಾಗದ ಸಹಾಯಕ ಎಂಜಿನಿಯರ್ ಒಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ವೆಂಕಟೇಶ ನಾಯಕ್ ಅಮಾನತುಗೊಂಡ ಅಧಿಕಾರಿ. ಕರ್ತವ್ಯಲೋಪ ಆರೋಪದ ಮೇರೆಗೆ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ಜುಲೈ 18ರಂದು ಅಮಾನತಿಗೆ ಸೂಚಿಸಿದ್ದರು. ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ  ಕುಡಿಯುವ ನೀರಿನ ಘಟಕಗಳ ದುರಸ್ತಿಯಲ್ಲಿ ಲೋಪವಾಗಿರುವುದು ಕಂಡು ಬಂದಿತ್ತು. ಈ ಕುರಿತಂತೆ ಬಾದಾಮಿ ಕೆಡಿಪಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಮಾನತಿಗೆ ಸೂಚಿಸಿದ್ದರು. ಇಲಾಖೆವಾರು ವಿಚಾರಣೆ ಬಾಕಿ ಇರಿಸಿದ ಪಂಚಾಯತ್ ರಾಜ್ ಇಲಾಖೆ ಮುಖ್ಯ ಎಂಜಿನಿಯರ್ ವೆಂಕಟೇಶ ನಾಯಕ್  ಅವರನ್ನು ಅಮಾನತು ಮಾಡಿ ಆದೇಶ ಹೊಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

siddaramiah Panchayat Raj ಸಹಾಯಕ ಆರೋಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ