ಮೈತ್ರಿ ಸರ್ಕಾರದ ನಡೆಗೆ ಬಿಜೆಪಿ ಖಂಡನೆ!

kota srinivas poojary delegation to meet governor soon!

24-07-2018

ಬೆಂಗಳೂರು: ಮೈತ್ರಿ ಸರ್ಕಾರದ ನಡೆ ಖಂಡಿಸಿ ರಾಜ್ಯ ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಲು ನಿರ್ಧರಿಸಿದೆ. ವಿಧಾನ ಪರಿಷತ್ ಗೆ ಹಂಗಾಮಿ ಸಭಾಪತಿ ಮುಂದುವರಿಕೆ ವಿಚಾರವನ್ನು ರಾಜ್ಯಪಾಲರ ಮುಂದಿಡಲಿದೆ. ಸಧ್ಯದಲ್ಲೇ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಖಾಯಂ ಸಭಾಪತಿ ನೇಮಕಗೊಳ್ಳಬೇಕಿತ್ತು. ಆದರೆ, ಆಗಿಲ್ಲ, ಪರಿಷತ್ ಇತಿಹಾಸದಲ್ಲಿ ಮೈತ್ರಿ ಸರ್ಕಾರ ಹೊಸ ಪದ್ಧತಿಗೆ ಮುಂದಾಗಿದೆ. ರಾಜ್ಯಪಾಲರ ಹಂಗಾಮಿ ಸಭಾಪತಿ ನೇಮಕ ಆದೇಶ ಹಿಡಿದು ತಮ್ಮ ಹುಳುಕು ಮುಚ್ಚಿಕೊಂಡಿದೆ ಎಂದು ಬಿಜೆಪಿ ಟೀಕೆ ಮಾಡಿದೆ.

ಮೈತ್ರಿ ಪಕ್ಷದಲ್ಲಿರುವ ಆಂತರಿಕ ಗಲಾಟೆಗೆ ರಾಜ್ಯಪಾಲರ ಆದೇಶ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನದ ಪರಮೋಚ್ಛ ಹುದ್ದೆಗೆ ಮೈತ್ರಿ ಸರ್ಕಾರ ಅಗೌರವ ತೋರುತ್ತಿದೆ. ತಕ್ಷಣ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಮೈತ್ರಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು. ಪರಿಷತ್ ಖಾಯಂ ಸಭಾಪತಿ ನೇಮಕಕ್ಕೆ ಚುನಾವಣೆಗೆ ಸೂಚನೆ ನೀಡಬೇಕು. ಈ ಮೇಲಿನ ಎಲ್ಲ ಅಂಶಗಳನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ ಮುಂದಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ