ಕೆ.ಬಿ.ಕೋಳಿವಾಡ, ಕೆ.ಎನ್.ರಾಜಣ್ಣಗೆ ಕೆಪಿಸಿಸಿಯಿಂದ ನೋಟಿಸ್

KPCC issued Notice to  congress leaders k.b koliwad and k.n.rajanna

23-07-2018

ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಕೈ ನಾಯಕರ ಬಹಿರಂಗ ಹೇಳಿಕೆ ಹಿನ್ನೆಲೆ, ಕೊನೆಗೂ ಕ್ರಮಕ್ಕೆ ಮುಂದಾದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಹಿರಿಯ ಮುಖಂಡ ಕೆ.ಬಿ.ಕೋಳಿವಾಡ ಹಾಗೂ ಕೆ.ಎನ್.ರಾಜಣ್ಣ ಅವರು ನೀಡಿದ್ದ ಬಹಿರಂಗ ಹೇಳಿಕೆ ಕುರಿತು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಸಿಎಂ ಕಣ್ಣೀರಿಗೆ ಪಕ್ಷದ ನಾಯಕರೇ ಕಾರಣವೆಂದು ಹೇಳಿಕೆ‌ ನೀಡಿದಕ್ಕೆ ಕೋಳಿವಾಡಗೆ, ಮೈತ್ರಿ ಸರ್ಕಾರಕ್ಕೆ ಆಯಸ್ಸು ಇಲ್ಲವೆಂದು ಹೇಳಿಕೆ ನೀಡಿದ ಕಾರಣ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೂ ನೋಟಿಸ್ ಕೊಡಲಾಗಿದೆ. ಈ ಇಬ್ಬರೂ ನಾಯಕರೂ ವಾರದೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ.

ಪಕ್ಷಕ್ಕೆ ಮುಜುಗರವಾಗುಂತಹ ಹೇಳಿಕೆ ನೀಡಿದ್ದೀರಿ, ಇದು ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿದೆ, ಹಾಗಾಗಿ ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಿ, ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷರ ಪರವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಅವರಿಂದ ನೋಟಿಸ್ ನೀಡಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ