250 ವರ್ಷಗಳ ಬಳಿಕ ಎರಡು ಮಠಗಳ ಪೀಠಾಧಿಪತಿಗಳ ಮುಖಾಮುಖಿ !

Kannada News

29-05-2017

250 ವರ್ಷಗಳ ಹಿಂದೆ ಸೋದೆ ಮತ್ತು ಸುಬ್ರಹ್ಮಣ್ಯ ಮಠಾಧಿಪತಿಗಳ ನಡುವೆ ಮನಸ್ತಾಪ, ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಪರಸ್ಪರ ಭೇಟಿ, ಮಾತುಕತೆ ಬಿಟ್ಟಿದ್ದ ಶ್ರೀಗಳು ಮತ್ತೆ ಒಂದಾಗಿದ್ದಾರೆ. ಸೊದೆ ಸುಬ್ರಹ್ಮಣ್ಯ ಪೀಠಾಧಿಪತಿಗಳು, ಪೇಜಾವರ ಶ್ರೀ ಸಮ್ಮುಖದಲ್ಲಿ ಒಂದಾಗಿದ್ದಾರೆ. ಇಬ್ಬರು ಶ್ರೀಗಳು, ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು ಇದೊಂದು ಐತಿಹಾಸಿಕ ಘಟನೆ, ಶತಮಾನದಿಂದ ಸೌಹಾರ್ದತೆ ಆಗಬೇಕೆಂದು ಎಲ್ಲರೂ ಅಪೇಕ್ಷೆ ಪಟ್ಟಿದ್ದರು. ಈಗ ಕಾಲ ಕೂಡಿ ಬಂದಿದೆ, ಇಬ್ಬರು ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ, ಎಲ್ಲಾ ಮಠಾಧೀಶರಲ್ಲಿ ಬಾಂಧ್ಯವ್ಯ ಬೆಳೆಯಬೇಕು.ಸ್ವಾಮೀಜಿಗಳು ಒಂದಾದರೆ ಜನರು ಒಂದಾಗುತ್ತಾರೆ ಎಂದು ಉಡುಪಿಯಲ್ಲಿ ಪೇಜಾವರ ಶ್ರೀ ಹೇಳಿದ್ದಾರೆ. ಸೋದೆ ಸುಬ್ರಹ್ಮಣ್ಯ ಶ್ರೀ ಗಳ ಸಮಾಗಮದಲ್ಲಿ ಎರಡು ಮಠಗಳು ಮತ್ತೆ ಒಂದಾಗಿವೆ. ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಇರಬೇಕು ಎಂದು ಶ್ರೀಗಳು ಹೇಳಿದ್ದಾರೆ. ಎಲ್ಲಾ ಮಠಾಧೀಶರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ 250 ವರ್ಷಗಳಿಂದ ಮನಸ್ತಾಪ ಇತ್ತು ನಮ್ಮಿಬ್ಬರಿಗೂ ಒಂದಾಗಬೇಕೆಂದು ಇಚ್ಛೆ ಇತ್ತು, ಈಗ ಎಲ್ಲದಕ್ಕೂ ಕಾಲ ಕೂಡಿ ಬಂತು ದೇವರ - ಗುರುಗಳ ಪ್ರೇರಣೆಯಿಂದ ಇದು ಸಾಧ್ಯವಾಗಿದ್ದು, ನಾಳೆ ಶಿರಸಿಯ ಸೋದೆಯಲ್ಲಿ ಪುರಪ್ರವೇಶವಿದೆ, 31ಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ದಾಟುತ್ತೇವೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭಶ್ರೀ ಹೇಳಿದ್ದಾರೆ.


 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ