ಪ್ರಾಣಕ್ಕಿಂತ ಹೆಚ್ಚೇನಲ್ಲ ಫೋನ್ ಕರೆ

Accident: an young guy died because of a phone call!

23-07-2018

ಬೆಂಗಳೂರು: ಕರೆ ಸ್ವೀಕರಿಸಲು ಮೊಬೈಲ್‍ನ್ನು ಜೇಬಿನಿಂದ ತೆಗೆಯಲು ಹೋಗಿ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್‍ನ 80 ಅಡಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ವೇಗವಾಗಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಯುವಕ ದೊಡ್ಡಕಲ್ಲಸಂದ್ರದ ಕಿರಣ್‍ಕುಮಾರ್ (27) ಮೊಬೈಲ್ ಕರೆ ಸ್ವೀಕರಿಸಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಬಟ್ಟೆ ಹ್ಯಾಂಗರ್ ಮಾರಾಟ ಮಾಡುತ್ತಿದ್ದ ಕಿರಣ್‍ ಕುಮಾರ್ ರಾತ್ರಿ 10.30ರ ವೇಳೆ ಮನೆಗೆ ಸುಜಕಿ ಆಕ್ಸಿಸ್ ಸ್ಕೂಟರ್ ನಲ್ಲಿ ಮನೆಗೆ ಬರುತ್ತಿದ್ದರು.

ಮಾರ್ಗ ಮಧ್ಯೆ 80ಅಡಿ ರಸ್ತೆ ಬಳಿ ಬಂದ ಕರೆ ಸ್ವೀಕರಿಸಲು ಮೊಬೈಲ್ ತೆಗೆಯಲು ಹೋಗಿ ಆಯತಪ್ಪಿ ಕೆಳಗೆಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Mobile driving ಸ್ಕೂಟರ್ ಸಭಾಂಗಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ