ರಾಹುಲ್ ನಾಯಕತ್ವಕ್ಕೆ ತಕರಾರಿಲ್ಲ: ದೇವೇಗೌಡ

H.D.devegowd

23-07-2018

ಬೆಂಗಳೂರು: ಮಹಾ ಮೈತ್ರಿ ನಾಯಕತ್ವವನ್ನೂ ರಾಹುಲ್ ಗಾಂಧಿಗೆ ವಹಿಸುವ ಬಗ್ಗೆ ನನ್ನ ತಕರಾರಿಲ್ಲ ಎಂದು ನವದೆಹಲಿಯಲ್ಲಿ ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ನಿನ್ನೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ. ಕರ್ನಾಟಕದಲ್ಲಿ ನಾವು ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ದೇವೇಗೌಡರು ಹೇಳಿದರು.

ಬಿಜೆಪಿಗೆ ಹೊರತಾಗಿ ಸುಮಾರು 280 ಸೀಟುಗಳನ್ನು ಗೆಲ್ಲುವುದು ವಿಪಕ್ಷ ಮೈತ್ರಿಯ ಗುರಿ ಎಂದರು. ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ವ್ಯರ್ಥ ಪ್ರಯತ್ನವೇನಲ್ಲ. ನಮ್ಮ ಬಳಿ ಸಂಖ್ಯಾಬಲ ಇಲ್ಲ ಎಂಬುದು ಗೊತ್ತಿತ್ತು. ಆದರೆ, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿರಿಸುವ ಯತ್ನ ಮಾಡಿದ್ದೇವೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

 


ಸಂಬಂಧಿತ ಟ್ಯಾಗ್ಗಳು

H.D.Deve Gowda Rahul Gandhi ಪ್ರಯತ್ನ ವೈಫಲ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ