ಪ್ರಪಂಚದ ಅತೀ ಚಿಕ್ಕ ಅಂತರಾಷ್ಟ್ರೀಯ ಸೇತುವೆ !

Kannada News

29-05-2017

ಪ್ರಪಂಚದಲ್ಲಿ ಎಂತೆಂಥಾ ಸೇತುವೆಗಳಿರುತ್ತೆವೆ ಎಂದರೆ, ಅವುಗಳನ್ನು ನೋಡುತ್ತಿದ್ದರೆ ಆಶ್ಚರ್ಯವಾಗುತ್ತದೆ. ಮೊನ್ನೆಯಷ್ಟೆ ಭಾರತದ ಅತೀ ಉದ್ದದ ಸೇತುವೆಯನ್ನು ಪ್ರಧಾನಿ ಮೋದಿಯವರು ಉಧ್ಘಾಟಿಸಿದ್ದು ನಮಗೆಲ್ಲ ನೆನಪಿರಬರಹುದು, ಆದರೆ ಪ್ರಪಂಚದ ಅತೀ ಚಿಕ್ಕ ಸೇತುವೆ ಒಂದಿದೆ, ಅದು ಎರಡು ದೇಶಗಳ ನಡವೆ ಹಂಚಿರುವ ದ್ವೀಪಗಳ ನಡುವೆ ಇದೆ. ಇದು ಪ್ರಪಂಚದ ಅತೀ ಚಿಕ್ಕ ಅಂತರಾಷ್ಟ್ರೀಯ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಅತೀ ಚಿಕ್ಕ ಸೇತುವೆಯ ಉದ್ದ ಕೇವಲ 32 ಫೀಟ್ ಅಂದರೆ 9.75 ಮೀಟರ್ ಅಷ್ಟೆ. ಈದ್ವೀಪದ ಹೆಸರು ಜಾವಿಕಾನ್ ದ್ವೀಪ, ಇದು ಅಮೇರಿಕಾದ ಮತ್ತು ಕೆನಡಾದ ಒಂಟಾರಿಯೋ ನಡುವಿನ ದ್ವೀಪ ಸಮೂಹಗಳ ನಡುವೆ ಇದೆ. ಸೇತುವೆಯ ಒಂದು ಕಡೆ ಅಮೇರಿಕದ ದೇಶದ ಧ್ವಜವಿದ್ದು, ಮತ್ತೊಂದು ಕಡೆ ಕೆನಡದ ದೇಶದ ಧ್ವಜವಿದೆ. ನೋಡಲು ಪುಟ್ಟದಾಗಿ ಕಾಣುವ ಈ ಸೇತುವೆ ಸುತ್ತಲೂ ನೀರಿದ್ದು ಆಕರ್ಷಿತವಾಗಿದೆ. ಈ ದ್ವೀಪಗಳಲ್ಲಿ ಸುಂದರವಾದ ಹಸಿರು ಮತ್ತು ಬಂಡೆಗಳಿಂದ ಕೂಡಿದ್ದು, ವಲಸೆ ಹಕ್ಕಿಗಳಿಗೆ ಸುಂದರವಾದ ತಾಣವಾಗಿದೆ.           


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ