ಜೂಜಾಟದಲ್ಲಿ ತೊಡಗಿದ್ದ 14ಸರ್ಕಾರಿ ಶಿಕ್ಷಕರ ಅರೆಸ್ಟ್

gambling: police arrested 14 teachers at Kalaburagi

23-07-2018

ಕಲಬುರಗಿ: ಶಾಲೆಗೆ ಬರುವ ಮಕ್ಕಳನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಶಿಕ್ಷಕರ ಜವಾಬ್ದಾರಿ. ಮಕ್ಕಳು ತಪ್ಪು ಮಾಡಿದರೆ ಅವರಿಗೆ ಬುದ್ಧಿ ಹೇಳಿ ತಿಳಿ ಹೇಳುವುದು, ಯಾವುದು ತಪ್ಪು ಯಾವುದು ಸರಿ ಎಂದೆಲ್ಲಾ ವಿವರಿಸಿ ಉತ್ತಮ ನಾಗರಿಕರನ್ನಾಗಿ ಮಾಡುವುದು ಹೀಗೆ ಶಿಕ್ಷಕರ ಮೇಲೆ ಅಪಾರವಾದ ಜವಾಬ್ದಾರಿಗಳಿಗೆ. ಹಾಗಾದರೆ ಶಿಕ್ಷಕರೇ ತಪ್ಪು ಮಾಡಿದರೆ ಹೇಗೆ? ಹೌದು ಈ ರೀತಿಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲೆಯ ಆಳಂದ ಪಟ್ಟಣದ ಲಾಡ್ಜ್ ಒಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ 14ಸರ್ಕಾರಿ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 83 ಸಾವಿರ ನಗದು ಹಾಗು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆಳಂದ‌ ಪೊಲೀಸ್ ಠಾಣೆಯಲ್ಲಿ ಪ್ರಕರಣಲಾಗಿದ್ದು ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gambling Teachers ಭವಿಷ್ಯ ಬುದ್ಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ