ಅನಂತಕುಮಾರ್ ಹೆಗಡೆಯ ಮತ್ತೊಂದು ವಿವಾದಾತ್ಮಕ ಹೇಳಿಕೆ!

one more controversial statement by ananth kumar hegde

23-07-2018

ದಾವಣಗೆರೆ: ‘ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಪುಕ್ಕಟೆ ಉಪವಾಸ ಕೂತಿದ್ದವರಿಂದಲ್ಲ. ಸರ್ಕಾರಿ ಕಚೇರಿಗಳಲ್ಲಿ ಇರುವ ಮೂರು ಫೋಟೋಗಳಿಂದಲ್ಲ’ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮೊತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, 'ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು ಎಂದು ದೇಶದ ಅಭಿಪ್ರಾಯ. ಒಂದು ಕಡೆ ಅಪ್ರಬುದ್ಧತೆಯ ಪ್ರತೀಕ, ಮತ್ತೊಂದು ಕಡೆ ಪ್ರಬುದ್ಧತೆಯ ಮೇರು ಪರ್ವತ ಎಂದು ರಾಹುಲ್ ಗಾಂಧಿ ಕಾಲೆಳೆದು ಮೋದಿಯವರನ್ನು ಹೊಗಳಿದ್ದಾರೆ. ರಾಜಕಾರಣದ ಬಗ್ಗೆ ಹೇಳಲು ಹೇಸಿಗೆಯಾಗುವಂತೆ ಮಾಡಿದ್ದು ಒಂದು ರಾಜಕಾರಣದ ಕುಟುಂಬ ಎಂದು ನೆಹರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶಕ್ಕೆ ಏಕೀಕೃತ ಸ್ವರೂಪ ಕೊಟ್ಟಿದ್ದು ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ. ಲಾಲ್ ಬಹದ್ದೂರ್ ಶಾಸ್ತ್ರಿ ನಂತರದಲ್ಲಿ ಹೇಡಿತನದ ಪರಪಂಪರೆ ಮುಂದುವರೆದಿತ್ತು. ವಾಜಪೇಯಿ ನಂತರದಲ್ಲಿ ಮನೆ ಮುರುಕ ಸರ್ಕಾರ ಬಂತು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಟು ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Anant Kumar Hegde controversial ಮಾದ್ಯಮ ಹೇಡಿತನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ